ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಹ್ಮಾವರ | ಮೆಸ್ಕಾಂ: ರಾಷ್ಟ್ರೀಯ ವಿದ್ಯುತ್ ಸಪ್ತಾಹ ಜಾಗೃತಿ ಜಾಥಾ

Published 6 ಜುಲೈ 2024, 14:04 IST
Last Updated 6 ಜುಲೈ 2024, 14:04 IST
ಅಕ್ಷರ ಗಾತ್ರ

ಬ್ರಹ್ಮಾವರ: ಇಂಧನ ಇಲಾಖೆ, ಮೆಸ್ಕಾಂ ಸಹಯೋಗದಲ್ಲಿ ವಿದ್ಯುತ್‌ ಸುರಕ್ಷತಾ ಸಪ್ತಾಹ ಶನಿವಾರ ಆಚರಿಸಲಾಯಿತು.

ಸಾರ್ವಜನಿಕರಲ್ಲಿ ವಿದ್ಯುತ್‌ ಸುರಕ್ಷತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಮೆಸ್ಕಾಂ ಸಿಬ್ಬಂದಿ, ಬ್ರಹ್ಮಾವರ ಮೆಸ್ಕಾಂ ಕಚೇರಿಯಿಂದ ಹೊರಟು ಬಸ್ ನಿಲ್ದಾಣ, ರಥಬೀದಿ ಮೂಲಕ ಜಾಗೃತಿ ಜಾಥಾ ನಡೆಸಿದರು.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಪೂಜಾರಿ ಮಾತನಾಡಿ, ಸಾರ್ವಜನಿಕರು, ಇಲಾಖಾ ಸಿಬ್ಬಂದಿ ಅತಿ ಆತ್ಮವಿಸ್ವಾಸದಿಂದ ಜೀವಕ್ಕೆ ಅಪಾಯ ತಂದುಕೊಳ್ಳುವ ವಿದ್ಯಾಮಾನ ಗ್ರಾಮೀಣ, ನಗರ ಭಾಗಗಳಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬ್ರಹ್ಮಾವರದಲ್ಲಿ ಎಲ್ಲಾ ಶಾಲಾ–ಕಾಲೇಜು ಕಚೇರಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.

ನಗರದ ಅಂಗಡಿ, ಮನೆ, ಸಾರ್ವಜನಿಕರಿಗೆ ಜಾಗೃತಿ ಕರಪತ್ರ ಹಂಚಲಾಯಿತು. ಸಹಾಯಕ ಎಂಜಿನಿಯರ್ ಸುದರ್ಶನ್, ಸಹಾಯಕ ಲೆಕ್ಕಾಧಿಕಾರಿ ಹೇಮಲತಾ, ಮೆಸ್ಕಾಂನ ವಿವಿಧ ಶಾಖೆಗಳ ಕಚೇರಿ ಸಿಬ್ಬಂದಿ, ಲೈನ್‌ಮ್ಯಾನ್‌ ಜಾಥಾದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT