ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಉಪ ವಲಯ ಅರಣ್ಯಾಧಿಕಾರಿ

Published 21 ಜೂನ್ 2024, 16:01 IST
Last Updated 21 ಜೂನ್ 2024, 16:01 IST
ಅಕ್ಷರ ಗಾತ್ರ

ಉಡುಪಿ: ಮರ ತೆರವುಗೊಳಿಸಲು ನಿರಾಕ್ಷೇಪಣಾ ಪತ್ರ ನೀಡುವುದಕ್ಕಾಗಿ ಲಂಚ ಪಡೆಯುತ್ತಿದ್ದ ವೇಳೆ ಉಪ ವಲಯ ಅರಣ್ಯಾಧಿಕಾರಿಯನ್ನು ಉಡುಪಿಯ ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬೈಂದೂರು ವಲಯದ ಉಪ ವಲಯ ಅರಣ್ಯಾಧಿಕಾರಿ ಬಂಗಾರಪ್ಪ ಬಂಧಿತ ಆರೋಪಿ. ಬೈಂದೂರು ಅರಣ್ಯ ವೀಕ್ಷಕ ವಿನಾಯಕ ಎಂಬುವರು ದಾಳಿಯ ವೇಳೆ ಪರಾರಿಯಾಗಿದ್ದಾರೆ ಎಂದು ಉಡುಪಿ ಲೋಕಾಯುಕ್ತ ಡಿವೈಎಸ್‌ಪಿ ಪ್ರಕಾಶ್‌ ಕೆ.ಸಿ. ತಿಳಿಸಿದರು.

‘ಶಿರೂರಿನ ಮುಹಮ್ಮದ್‌ ಅನ್ವರ್‌ ಹಸನ್‌ ಅವರು ತಮ್ಮ ಜಾಗದಲ್ಲಿರುವ ಹಲಸಿನ ಮರವನ್ನು ತೆರವುಗೊಳಿಸಲು ನಿರಾಕ್ಷೇಪಣಾ ಪತ್ರಕ್ಕಾಗಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ₹4,000 ಲಂಚ ನೀಡಬೇಕೆಂದು ಬಂಗಾರಪ್ಪ ಬೇಡಿಕೆ ಇಟ್ಟಿದ್ದರು. ಈ ಕುರಿತು ಅನ್ವರ್‌ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಅವರು ಹೇಳಿದರು.

ಇನ್ಸ್‌ಪೆಕ್ಟರ್‌ ಮಂಜುನಾಥ್‌ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT