ಕಾರ್ಕಳ : ಇಲ್ಲಿನ ಕರಿಯಕಲ್ಲು ನಿವಾಸಿ ರಾಜಾರಾಮ ರಾವ್(55) ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದು, ಅವರ ಅಣ್ಣ ಸಾಣೂರು ಚಿಕ್ಕ
ಬೆಟ್ಟು ನಿವಾಸಿ ಗಣೇಶ್ ರಾವ್ (60) ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

ಜೂನ್ 8 ರಂದು ತಾಲ್ಲೂಕಿನ ಜಾರ್ಕಳ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ರಾಜಾರಾಮ ರಾವ್ ಅವರು ಚಿಕಿತ್ಸೆಗೆ ಸ್ಪಂದಿಸದೆ, ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೋವಿಡ್ ಕಾರಣಕ್ಕೆ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಣೇಶ್ ರಾವ್ ಸಂಜೆ ವೇಳೆ ನಿಧನರಾದರು.

ವೃತ್ತಿಯಲ್ಲಿ ಟೇಲರ್, ಟೆಂಪೋ ಚಾಲಕರಾಗಿದ್ದ ರಾಜಾರಾಮ ಕರಿಯ
ಕಲ್ಲು ಹಿಂದೂ ರುದ್ರಭೂಮಿಯಲ್ಲಿ ಕೋವಿಡ್ನಿಂದ ಮೃತಪಟ್ಟ 40ಕ್ಕೂ ಅಧಿಕ ಜನರ ಅಂತಿಮ ಸಂಸ್ಕಾರ ನೇರವೇರಿಸಿದ್ದರು. ಅವರು ಕಳೆದ 2 ದಶಕಗಳಲ್ಲಿ ಸಾವಿರಕ್ಕೂ ಅಧಿಕ ಮೃತದೇಹಗಳ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಕ್ರೀಡೆ, ಭಜನೆ, ರಕ್ತದಾನ, ಸಾಮಾಜಿಕ ಕಾರ್ಯಗಳಲ್ಲೂ ಅವರು ಸಕ್ರಿಯರಾಗಿದ್ದರು ಎಂದು ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ತಿಳಿಸಿದರು. ಅವರಿಗೆ ಪತ್ನಿ, ಪುತ್ರಿ ಇದ್ದಾರೆ.

ನಾಸಿಕ್ನಲ್ಲಿ ವ್ಯವಹಾರ ನಡೆಸುತ್ತಿದ್ದ ಗಣೇಶ್ ರಾವ್ ಕೆಲ ವರ್ಷಗಳ ಹಿಂದೆ ಊರಿಗೆ ಬಂದು ಜಮೀನು ಖರೀದಿಸಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.