ಭಾನುವಾರ, ಆಗಸ್ಟ್ 18, 2019
21 °C
ಕ್ಲೀನ್‌ ಉಡುಪಿ ಪ್ರಾಜೆಕ್ಟ್‌ನಿಂದ ಪರಿಸರ ಸ್ನೇಹಿ ಅಭಿಯಾನ

ಪರಿಸರ ಸ್ನೇಹಿ ಬಟ್ಟೆ ಚೀಲ ವಿತರಣೆ

Published:
Updated:
Prajavani

ಉಡುಪಿ: ಕ್ಲೀನ್ ಉಡುಪಿ ಪ್ರಾಜೆಕ್ಟ್‌ನಿಂದ 9ನೇ ವಾರದ ಪರಿಸರ ಸ್ನೇಹಿ ಅಭಿಯಾನ ಶನಿವಾರ ಅಜ್ಜರಕಾಡು ಉದ್ಯಾನದಲ್ಲಿ ನಡೆಯಿತು. ಹಿರಿಯ ವೈದ್ಯ ಡಾ.ಸುರೇಶ್ ಚಂದ್ರ ಶೆಟ್ಟಿ ಚಾಲನೆ ನೀಡಿದರು.

ಬಟ್ಟೆ ಚೀಲಗಳನ್ನು ವಿತರಿಸುವ ಅಭಿಯಾನಕ್ಕೆ ಮಲಬಾರ್ ಗೋಲ್ಡ್ ಅಂಡ್‌ ಡೈಮಂಡ್ಸ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ನಾಯಕ್ ಚಾಲನೆ ನೀಡಿ ಮಾತನಾಡಿ, ಅವ್ಯಾಹತವಾಗಿ ಮರಗಳನ್ನು ಕಡಿಯುವುದರಿಂದ ಅರಣ್ಯ ಕಡಿಮೆಯಾಗುತ್ತಿದೆ. ಪರಿಸರವನ್ನು ನಾಶಮಾಡಿದರೆ ಮಾನವ ಜನಾಂಗದ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಉಪಯೋಗ ಕಡಿಮೆಮಾಡುವ. ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಉಪಯೋಗಿಸುವ ಹವ್ಯಾಸ ಬೆಳೆಸಿಕೊಳ್ಳೋಣ ಎಂದರು.

ಉದ್ಯಾನದ ಸುತ್ತ ಸಸಿಗಳನ್ನು ನೆಡಲಾಯಿತು. ಸ್ವಚ್ಚತಾ ಅಭಿಯಾನದ ಬಳಿಕ ಬಟ್ಟೆ ಚೀಲಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಈ ಸಂದರ್ಭ ಬಂಧನ್ ಬ್ಯಾಂಕ್ ಪ್ರಬಂಧಕ ಗುರುದತ್, ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಹಿರಿಯ ನಾಗರಿಕ ವೇದಿಕೆ ಕಾರ್ಯದರ್ಶಿ ಸದಾನಂದ ಹೆಗ್ಡೆ, ಮಾಜಿ ಸೈನಿಕ ವಾದಿರಾಜ್ ಹೆಗ್ಡೆ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಜಿಲ್ಲಾ ಸಂಯೋಜಕ ವಿವೇಕ್, ಸದಾನಂದ ಶೆಟ್ಟಿ, ರಫೀಕ್ ಖಾನ್, ಉದಯ ನಾಯ್ಕ್, ಚಿತ್ತರಂಜನ್, ಅಭಿಷೇಕ್, ವೀಕ್ಷಿತ್ ಕೊರಂಗ್ರಪಾಡಿ, ಕಿರಣ್ ಭಟ್ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Post Comments (+)