ಸೋಮವಾರ, ಅಕ್ಟೋಬರ್ 26, 2020
20 °C
210 ಸೋಂಕಿತರು ಗುಣಮುಖ: ಮೃತರ ಸಂಖ್ಯೆ 126ಕ್ಕೇರಿಕೆ

ಉಡುಪಿ: ನಾಲ್ವರ ಸಾವು; 227 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಗುರುವಾರ ನಾಲ್ವರು ಕೋವಿಡ್ ಸೋಂಕಿತರು ಮೃತಪಟ್ಟಿದ್ದು, 227 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಉಡುಪಿ ತಾಲ್ಲೂಕಿನ 65, 66 ವರ್ಷದ ವ್ಯಕ್ತಿ ಹಾಗೂ 41 ವರ್ಷ ಮಹಿಳೆ, ಕಾರ್ಕಳ ತಾಲ್ಲೂಕಿನ 68 ವರ್ಷದ ಸೋಂಕಿತ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಮರಣ ಪ್ರಮಾಣ 126ಕ್ಕೇರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯ 119, ಕುಂದಾಪುರದ 42 ಹಾಗೂ ಕಾರ್ಕಳದ 56, ಇತರೆ ಜಿಲ್ಲೆಗಳ 10 ಮಂದಿಯಿದ್ದು, 123 ಪುರುಷರು ಹಾಗೂ 104 ಮಹಿಳೆಯರು ಇದ್ದಾರೆ.

ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಾಗೂ ಪ್ರಾಥಮಿಕ ಸಂಪರ್ಕಕ್ಕೆ ಬಂದ 560 ಶಂಕಿತರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಗುರುವಾರ 210 ರೋಗಿಗಳು ಗುಣಮುಖರಾಗಿದ್ದು, ಇದುವರೆಗೂ ಸೋಂಕಿನಿಂದ ಮುಕ್ತರಾದವರ ಸಂಖ್ಯೆ 11,552ಕ್ಕೇರಿಕೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,572 ಇದ್ದು, ಸಕ್ರಿಯ ಸೋಂಕಿತರು 1,897 ಮಂದಿ ಇದ್ದಾರೆ. ಇವರಲ್ಲಿ 852 ರೋಗಿಗಳು ಕೋವಿಡ್‌ ಆಸ್ಪತ್ರೆಗಳಲ್ಲಿದ್ದರೆ, 1,045 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.