ಉಡುಪಿ: ಜಿಲ್ಲೆಯಲ್ಲಿ ಕೋವಿಡ್–19 ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದ ಸೋಂಕು ದೃಢಪಟ್ಟಿದ್ದು, ಮಂಗಳವಾರ ಒಂದೇ ದಿನ 477 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಸಾಗಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಏ.21ರಂದು 471 ಮಂದಿಗೆ ಸೋಂಕು ದೃಢಪಟ್ಟಿದ್ದು ಇದುವರೆಗಿನ ಗರಿಷ್ಠ ಪ್ರಮಾಣವಾಗಿತ್ತು.

20 ದಿನಗಳಲ್ಲಿ 4019 ಸೋಂಕು:

ಕಳೆದ 5 ತಿಂಗಳಿನಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕ್ಷೀಣವಾಗಿತ್ತು. ನವೆಂಬರ್ನಲ್ಲಿ 819, ಡಿಸೆಂಬರ್ನಲ್ಲಿ 369, ಜನವರಿಯಲ್ಲಿ 269, ಫೆಬ್ರುವರಿಯಲ್ಲಿ 283, ಮಾರ್ಚ್ನಲ್ಲಿ 925 ಸೋಂಕು ಪತ್ತೆಯಾಗಿತ್ತು. ಏಪ್ರಿಲ್ನಲ್ಲಿ ಎರಡನೇ ಅಲೆಯ ಪ್ರಭಾವ ಹೆಚ್ಚಾಗಿದ್ದು, ಕೇವಲ 20 ದಿನಗಳಲ್ಲಿ 4,019 ಸೋಂಕಿತ ಪ್ರಕರಣಗಳು ಕಂಡುಬಂದಿವೆ.

ಮಂಗಳವಾರ ದೃಢಪಟ್ಟ 477 ಸೋಂಕಿತರಲ್ಲಿ ಉಡುಪಿಯ 263, ಕುಂದಾಪುರದ 128, ಕಾರ್ಕಳದ 82 ಹಾಗೂ ಬೇರೆ ಜಿಲ್ಲೆಗಳ ನಾಲ್ವರು ಇದ್ದು, 266 ಪುರುಷರು, 211 ಮಹಿಳೆಯರು ಇದ್ದಾರೆ. 38 ಸೋಂಕಿತರಿಗೆ ಆಸ್ಪತ್ರೆಗಳಲ್ಲಿ, ಉಳಿದ 439 ಮಂದಿಗೆ ಹೋಂ ಐಸೊಲೇಷನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಲ್ಲಿ 234 ಮಂದಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡರೆ, 243 ಜನರಿಗೆ ಲಕ್ಷಣಗಳು ಇಲ್ಲ.

ಒಟ್ಟು ಪ್ರಕರಣಗಳ ಸಂಖ್ಯೆ 29,650ಕ್ಕೆ ಏರಿಕೆಯಾಗಿದ್ದು, 1892 ಸಕ್ರಿಯ ಸೋಂಕಿತರು ಇದ್ದಾರೆ. ಇದುವರೆಗೂ 27564 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 194 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 4,94,899 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.

ಇದುವರೆಗೂ 45 ವರ್ಷ ಮೇಲ್ಪಟ್ಟ 1,50,585 ಮಂದಿ ಕೋವಿಡ್ ಮೊದಲ ಡೋಸ್ ಪಡೆದಿದ್ದು, 21768 ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. 22460 ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್, 17525 ಮಂದಿ ಎರಡನೇ ಡೋಸ್, 8059 ಮಂದಿ ಮುಂಚೂಣಿ ಕಾರ್ಯಕರ್ತರು ಮೊದಲ ಡೋಸ್, 3154 ಎರಡನೇ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಒಟ್ಟು 2,23,551 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.