ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಪತ್ತೆಯಾಗದ ಐವರ ಸೋಂಕಿನ ಮೂಲ; ಆತಂಕ

ಜಿಲ್ಲೆಯಲ್ಲಿ 16 ಮಂದಿಗೆ ಕೋವಿಡ್‌–19
Last Updated 3 ಜುಲೈ 2020, 16:58 IST
ಅಕ್ಷರ ಗಾತ್ರ

ಉಡು‍ಪಿ: ಜಿಲ್ಲೆಯಲ್ಲಿ ಶುಕ್ರವಾರ 16 ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಐವರಿಗೆ ಸೋಂಕು ತಗುಲಿದ್ದು ಹೇಗೆ ಎಂಬ ಮಾಹಿತಿಯೇ ಇಲ್ಲ. ಜತೆಗೆ, ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.

ಮಹಾರಾಷ್ಟ್ರದಿಂದ ಬಂದ ನಾಲ್ವರಲ್ಲಿ ಹಾಗೂ ಬೆಂಗಳೂರು, ಮಂಗಳೂರಿಗೆ ಪ್ರಯಾಣ ಬೆಳೆಸಿದ ಇಬ್ಬರಲ್ಲಿ, ರೋಗಿ ಸಂಖ್ಯೆ ಪಿ–11338 ಸಂಪರ್ಕಕ್ಕೆ ಬಂದ ಐವರಲ್ಲಿ ಸೋಂಕು ಪತ್ತೆಯಾಗಿದೆ.‌ ಸೋಂಕಿತರಲ್ಲಿ 3 ವರ್ಷದ ಮಗು ಹಾಗೂ 7 ಮಹಿಳೆಯರು, 8 ಪುರುಷರು ಇದ್ದಾರೆ. ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶುಕ್ರವಾರ 868 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. 1417 ವರದಿಗಳು ಬರುವುದು ಬಾಕಿ ಇದೆ. ಸೋಂಕಿನ ಲಕ್ಷಣಗಳಿದ್ದ 18 ಮಂದಿಯನ್ನು ಐಸೊಲೇಷನ್‌ ವಾರ್ಡ್‌ಗೆ ದಾಖಲಿಸಲಾಗಿದೆ.‌

1104 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, 151 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಸೋಂಕಿಗೆ ಮೂವರು ಬಲಿಯಾಗಿದ್ದಾರೆ.

ಆರೋಗ್ಯ ತಪಾಸಣೆ–18

ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾ–0

ಗುಣಮುಖರಾದವರು–14

ಹೊಸ ಸೇರ್ಪಡೆ-18

ಹೋಂ ಕ್ವಾರಂಟೈನ್‌ ಪೂರ್ಣ-0

ಪರೀಕ್ಷೆಗೆ ಕಳುಹಿಸಿದ ಮಾದರಿ–868

ವರದಿ ಪಾಸಿಟಿವ್‌–16

ವರದಿ ನೆಗೆಟಿವ್‌-273

–––––––––
ಆರೋಗ್ಯ ತಪಾಸಣೆ–5,909

ಹೋಂ ಕ್ವಾರಂಟೈನ್‌–1034

ಮಾದರಿ–16,498

ಪಾಸಿಟಿವ್‌–1,258

ನೆಗೆಟಿವ್‌–13,823

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT