ಶನಿವಾರ, ಆಗಸ್ಟ್ 13, 2022
27 °C
226 ಮಂದಿಗೆ ಕೋವಿಡ್‌

ಉಡುಪಿಛ ನಾಲ್ವರು ಕೋವಿಡ್ ಸೋಂಕಿತರು ಸಾವು: 328 ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಗುರುವಾರ ನಾಲ್ವರು ಕೋವಿಡ್‌ ಸೋಂಕಿತರು ಮೃತಪಟ್ಟಿದ್ದು, 226 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಸೋಂಕಿನಿಂದ ಬಳಲುತ್ತಿದ್ದ ಕಾರ್ಕಳ ತಾಲ್ಲೂಕಿನ 84 ವರ್ಷದ ವೃದ್ಧ, ಕುಂದಾಪುರದ 46 ವರ್ಷದ ವ್ಯಕ್ತಿ, ಉಡುಪಿಯ 65 ವರ್ಷದ ವೃದ್ಧ ಹಾಗೂ 45 ವರ್ಷದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳಿದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಮೃತರಾದ ಸೋಂಕಿತರ ಸಂಖ್ಯೆ 106ಕ್ಕೇರಿಕೆಯಾಗಿದೆ.

226 ಸೋಂಕಿತರಲ್ಲಿ ಉಡುಪಿ ತಾಲ್ಲೂಕಿನ 137, ಕುಂದಾಪುರ ತಾಲ್ಲೂಕಿನ 59, ಕಾರ್ಕಳದ 25 ಹಾಗೂ ಇತರೆ ಜಿಲ್ಲೆಗಳ ಐವರು ಸೇರಿದ್ದು, 128 ಪುರುಷರು ಹಾಗೂ 98 ಮಹಿಳೆಯರು ಇದ್ದಾರೆ. 118 ಮಂದಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ, 108 ಜನರಲ್ಲಿ ಲಕ್ಷಣಗಳು ಪತ್ತೆಯಾಗಿಲ್ಲ.

ಪ್ರಾಥಮಿಕ ಸಂಪರ್ಕದಿಂದ 121, ಐಎಲ್‌ಐ ಲಕ್ಷಣಗಳಿದ್ದ 68, ತೀವ್ರ ಉಸಿರಾಟದ ಸಮಸ್ಯೆಯಿದ್ದ 8, ಅಂತರ ಜಿಲ್ಲೆ ಹಾಗೂ ವಿದೇಶ ಪ್ರಯಾಣ ಹಿನ್ನೆಲೆಯ ಒಬ್ಬರಿಗೆ ಸೋಂಕು ತಗುಲಿದೆ.

ಪ್ರಾಥಮಿಕ ಸಂಪರ್ಕ ಹಾಗೂ ಸೋಂಕಿನ ಲಕ್ಷಣಗಳು ಕಂಡುಬಂದ 1,028 ಶಂಕಿತರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

328 ಗುಣಮುಖ:

ಗುರುವಾರ 325 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ 9,929 ಮಂದಿ ಸೋಂಕು ಬಾಧೆಯಿಂದ ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 12,150 ಪ್ರಕರಣಗಳಿದ್ದು, 2,115 ಸಕ್ರಿಯ ಸೋಂಕಿತರಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು