ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಲವಾರು ಪ್ರಕರಣ: ದೂರುದಾರನ ಮನೆಯಲ್ಲೇ ಮಾರಕಾಯುಧ ಪತ್ತೆ

Published 23 ಜೂನ್ 2024, 5:05 IST
Last Updated 23 ಜೂನ್ 2024, 5:05 IST
ಅಕ್ಷರ ಗಾತ್ರ

ಉಡುಪಿ: ಪುತ್ತೂರಿನ ಬಿರಿಯಾನಿ ಪಾಯಿಂಟ್‌ ಬಳಿ ನಡೆದ ತಲವಾರು ದಾಳಿ ಯತ್ನ ಪ್ರಕರಣದ ದೂರುದಾರನ ಮನೆಯಿಂದಲೇ ಪೊಲೀಸರು ತಲವಾರು ವಶಪಡಿಸಿಕೊಂಡಿದ್ದಾರೆ.

ಪುತ್ತೂರು ಗ್ರಾಮದ ಚರಣ್‌ (18) ಎಂಬಾತನ ಮನೆಯಲ್ಲಿ ತಲವಾರು ಇರುವ ಬಗ್ಗೆ ಉಡುಪಿ ನಗರ ಠಾಣಾ ಎಸ್‌.ಐ ಪುನೀತ್‌ ಕುಮಾರ್‌ ಅವರಿಗೆ ಮಾಹಿತಿ  ಲಭಿಸಿತ್ತು, ಅದರಂತೆ ನ್ಯಾಯಾಲಯದಿಂದ ವಾರೆಂಟ್‌ ಪಡೆದು ಶೋಧ ಕಾರ್ಯ ನಡೆಸಿದಾಗ ತಲವಾರು ಪತ್ತೆಯಾಗಿದೆ.

ಚರಣ್‌ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್‌ನಿಂದ ಚೆಕ್‌ ಕಳವು

ಉಡುಪಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ ಸಂತೆಕಟ್ಟೆ ಶಾಖೆಯಿಂದ 2.5 ಲಕ್ಷ ಮೌಲ್ಯದ ಚೆಕ್‌ ಅನ್ನು ಕಳವು ಮಾಡಿರುವ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಖೆಯ ಕಿಟಕಿಯ ಸರಳನ್ನು ಕತ್ತರಿಸಿ ಒಳನುಗ್ಗಿದ ಕಳ್ಳರು, ಚೆಕ್‌ ಕಳವು ಮಾಡಿರುವುದಾಗಿ ದೂರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT