ಉಡುಪಿ: ಷೇರು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಉದ್ಯಮಿಯನ್ನು ಬೆದರಿಸಿ ₹ 1,99,500 ನಗದು, ಮೊಬೈಲ್, ವಾಚ್ ಹಾಗೂ ಇತರೆ ದಾಖಲೆಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಗಳ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ:

ತುಮಕೂರು ಜಿಲ್ಲೆಯ ಅಶೋಕ್ ಕುಮಾರ್ ಉಡುಪಿ ರಥಬೀದಿಯ ವಾದಿರಾಜ ಕಾಂಫ್ಲೆಕ್ಸ್‌ನಲ್ಲಿರುವ ಗ್ಲೋಬಲ್ ಟೈಮ್ ಟ್ರೇಡರ್ಸ್ ಕಚೇರಿಯಲ್ಲಿ ಷೇರು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಕಚೇರಿಗೆ ಬಂದಿದ್ದ ಸಂತೋಷ ಎಂಬಾತ ವ್ಯವಹಾರದ ಮಾತುಕತೆಗಾಗಿ ಇನ್ನೊವಾ ಕಾರಿನಲ್ಲಿ ಕರೆದೊಯ್ದಿದ್ದ. ಈ ಸಂದರ್ಭ ದಾರಿ ಮಧ್ಯೆ ಇತರೆ ನಾಲ್ವರು ಆರೋಪಿಗಳು ಸೇರಿಕೊಂಡು ಅಶೋಕ್ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ₹ 70 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಅಶೋಕ್ ಒಪ್ಪದಿದ್ದಾಗ ರೆಸಾರ್ಟ್‌ಗೆ ಕರದೊಯ್ದು ಹಲ್ಲೆ ನಡೆಸಿದ್ದರು. ಬಳಿಕ ಆರೋಪಿಗಳು ಶನಿವಾರ ಮಹೇಶ್ ಅವರನ್ನು ಕೆನರಾ ಬ್ಯಾಂಕಿಗೆ ಕರೆತಂದು ಹಣ ಡ್ರಾ ಮಾಡಿಕೊಡುವಂತೆ ಬಲವಂತ ಮಾಡಿದ್ದರು. ಈ ಸಂದರ್ಭ ಮಹೇಶ್ ಜೋರಾಗಿ ಬೊಬ್ಬೆ ಹಾಕಿದಾಗ, ಆರೋಪಿಗಳು ಮಹೇಶ್ ಬಳಿಯಿದ್ದ ₹ 1,99,500 ನಗದು, 2 ಮೊಬೈಲ್, ವಾಚ್, ಮಾರ್ಕ್ಸ್ ಕಾರ್ಡ್, ಕಂಪೆನಿ ಪರವಾನಗಿ, ಬೈಕ್‌ನ ಆರ್‌ಸಿ ಕಾರ್ಡ್, ಡಿಎಲ್, ಚೆಕ್, ಪಾಸ್ ಪುಸ್ತಕ ಹಾಗೂ ಇತರೆ ದಾಖಲೆಗಳಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.