ಮಂಗಳವಾರ, ಜನವರಿ 21, 2020
28 °C

ಪ್ರೊ. ಎಂ. ರಾಮಚಂದ್ರ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ಲೇಖಕ, ಸಂಘಟಕ ಪ್ರೊ. ಎಂ. ರಾಮಚಂದ್ರ (80) ಶುಕ್ರವಾರ ಮುಂಜಾನೆ ಹೃದಯಾಘಾತದಿಂದ
ನಿಧನರಾಗಿದ್ದಾರೆ.

‘ಎಂ.ಆರ್‌.’ ಎಂದೇ ಜನಪ್ರಿಯರಾಗಿದ್ದ ರಾಮಚಂದ್ರ ಅವರು ಸಂಶೋಧನೆ, ಸಾಹಿತ್ಯ, ವಿಮರ್ಶೆ,ಉಪನ್ಯಾಸ, ಪತ್ರಿಕೋದ್ಯಮದಲ್ಲೂ ಹೆಸರು ಗಳಿಸಿದ್ದರು.

ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸುಳ್ಯದ ಮಂಡೆ
ಕೋಲಿನಲ್ಲಿ ಜನಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರವು 2018ನೇ ಸಾಲಿನ ‘ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ಇವರನ್ನು ಆಯ್ಕೆ ಮಾಡಿತ್ತು.

ರಾಮಚಂದ್ರ ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು