ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸುಧಾಕರ್ ರಾಜೀನಾಮೆ ಕೊಡಲಿ: ದಿನಕರ ಬಾಬು

Published 14 ಸೆಪ್ಟೆಂಬರ್ 2023, 5:10 IST
Last Updated 14 ಸೆಪ್ಟೆಂಬರ್ 2023, 5:10 IST
ಅಕ್ಷರ ಗಾತ್ರ

ಉಡುಪಿ: ಸಚಿವ ಡಿ.ಸುಧಾಕರ್‌ ವಿರುದ್ದ ಎಸ್‌ಸಿ ಎಸ್‌ಟಿ ದೌರ್ಜನ್ಯ ಮತ್ತು ಜಾತಿ ನಿಂದನೆಯಡಿ ಪ್ರಕರಣ ದಾಖಲಾಗಿದ್ದರೂ ಅವರ ರಾಜೀನಾಮೆ ಪಡೆಯದಿರುವುದು ಸರ್ಕಾರದ ಇಬ್ಬಂದಿ ನೀತಿ ತೋರಿಸುತ್ತದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಸಿ ದಿನಕರ ಬಾಬು ಟೀಕಿಸಿದ್ದಾರೆ.

ದಲಿತರ ಪ್ರಾಣ, ಮಾನಕ್ಕೆ ಬೆಲೆ ಇಲ್ಲವಾಗಿದೆ. ಸೆವೆನ್ ಹಿಲ್ಸ್ ಕಂಪೆನಿಯ ಪಾಲುದಾರ ಡಿ.ಸುಧಾಕರ್ ಮೋಸದಿಂದ ಯಲಹಂಕ ಗ್ರಾಮದ ಸುಬ್ಬಮ್ಮ ಅವರಿಗೆ ಸೇರಿದ 108/1 ಸರ್ವೆ ನಂಬರ್ ಜಮೀನನ್ನು ಕಬಳಿಕೆ ಮಾಡಿರುವುದು ಸ್ಪಷ್ಟವಾಗಿ ದಾಖಲೆ ಇದೆ. ವಿವಾದ ನ್ಯಾಯಾಲಯದಲ್ಲಿ ಇರುವಾಗ ಸಚಿವರು ರೌಡಿಗಳನ್ನು ಕಳಿಸಿ ದಲಿತ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ ಜೆಸಿಬಿಯಿಂದ ಮನೆ ನೆಲಸಮ ಮಾಡಿಸಿರುವುದು ಖಂಡನೀಯ.

ವಿಡಿಯೋವೊಂದರಲ್ಲಿ ಸ್ವತಃ ರೌಡಿ ಎಂದು ಹೇಳಿಕೊಂಡಿರುವ ಸಚಿವ ಸುಧಾಕರ್‌ ಅವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ.
ಪ್ರಕರಣದಲ್ಲಿ ಸಚಿವರ ರಾಜೀನಾಮೆ ಪಡೆದು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ನ ಮತ್ತೊಬ್ಬ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಈಚೆಗೆ ಸಾರ್ವಜನಿಕವಾಗಿ ಹೊಲೆಗೇರಿ ಜಾತಿ ನಿಂದಕ ಪದ ಬಳಿಸಿದ್ದಾರೆ. ಈಗ ಮತ್ತೊಬ್ಬ ಸಚಿವ ಡಿ.ಸುಧಾಕರ್ ದಲಿತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದಿನಕರ ಬಾಬು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT