ಶುಕ್ರವಾರ, ಡಿಸೆಂಬರ್ 2, 2022
21 °C

ಗಾಂಜಾ ಸೇವನೆ: ಒಂದೇ ದಿನ 24 ಆರೋಪಿಗಳ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿ ಹಾಗೂ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ 24 ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕೊಡಂಗೆಕಟ್ಟೆ ಬಳಿ ಜೋಶೂವ್ ಸಾಜನ್ ಥಾಮಸ್, ಈಶ್ವರ ನಗರದ ವಿಜಯದುರ್ಗ ಅಪಾರ್ಟ್‌ಮೆಂಟ್ ಬಳಿ ಕುರಿಯನ್ ಜೆ. ವಿನ್ಸೆಂಟ್, ಮಣಿಪಾಲ ಎಂಐಟಿ ಕಾಲೇಜಿನ ವಿದ್ಯಾರ್ಥಿಗಳಾದ ಶಿವೇಂದ್ರ ಕುಮಾರ್‌, ಕುಶಾಲ್ ಗುಪ್ತಾ, ಪ್ರಾಂಜಲ್ ಕುಮಾರ್, ನಿಪುಣ್ ಶ್ರೀವಾಸ್ತವ್, ಸಾಹಿಲ್ ಬಷೀರ್, ಪವನ್ ಪ್ರೀತಮ್, ಮುರುಡ್, ಆರ್ಯನ್, ಹರ್ಷ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಕೊಡಂಗೆಕಟ್ಟೆ ಬಳಿ ಮನುಕೃಷ್ಣನ್, ವಿಷ್ಣು ಬಾಬುರಾಜ್, ಯಶ್‌ ಶರ್ಮಾ, ಪ್ರಥಮೇಶ್‌ ಬಿ. ಪೈ, ರೋಹನ್‌ ಖ್ಯಾನಿ, ಯಶ್‌ ಮಯೂರ್‌ ದೋಶಿ, ಯಶ್‌ ಇಶ್ರಿತ್‌ ತಿನ್ಡೇವಾಲ್‌, ಕೊಮ್ಮುರಿ ಸಿದ್ದಿ ಸುಹಾಸ್‌, ಪ್ರಣೀತ್‌ ನರಪರಾಜು, ಏಕಾಂಕ್ಷ್ ರೋಹಿತ್‌ ಅಗರ್‌ವಾಲ್‌, ಆದರ್ಶ್‌ ಮೋಹನ್‌, ವೇದಾಂತ್‌ ಶೆಟ್ಟಿ, ಷಬ್‌ಜೋತ್‌ ಸಂಧು ಎಂಬ ಯುವಕರನ್ನು ವಶಕ್ಕೆ ಪಡೆದು ಮಣಿಪಾಲ ಕಸ್ತೂರಬಾ ಆಸ್ಪತ್ರೆ ಫೊರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೊಳಪಡಿಸಿದ್ದು ಗಾಂಜಾ ಸೇವನೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.