ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ ವಿವಿ ಮಹಿಳೆಯರ ಕೊಕ್ಕೊ: ಗುಲ್ಬರ್ಗಾ, ತುಮಕೂರು ವಿವಿ ಪ್ರೀ ಕ್ವಾರ್ಟರ್‌ಗೆ

ಟೂರ್ನಿ ಬೇರೆಡೆಗೆ ಸ್ಥಳಾಂತರ
Last Updated 16 ಅಕ್ಟೋಬರ್ 2018, 15:22 IST
ಅಕ್ಷರ ಗಾತ್ರ

ಉಡುಪಿ: ಇಲ್ಲಿನ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಕೊಕ್ಕೊ ಟೂರ್ನಿಯಲ್ಲಿ ಮಂಗಳವಾರ ಗುಲ್ಬರ್ಗಾ ಹಾಗೂ ತುಮಕೂರು ವಿಶ್ವವಿದ್ಯಾಲಯ ತಂಡಗಳು ಪ್ರೀ ಕ್ವಾರ್ಟರ್ ಫೈನಲ್ ತಲುಪಿದವು.

ಆಂಧ್ರಪ್ರದೇಶದ ವೇಮನ ವಿವಿ ತಂಡದ ವಿರುದ್ಧ ಗುಲ್ಬರ್ಗಾ ವಿವಿ ವಾಕ್‌ ಓವರ್ ಪಡೆದರೆ, ತಮಿಳುನಾಡು ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿವಿ ವಿರುದ್ಧ ತುಮಕೂರು ವಿಶ್ವವಿದ್ಯಾಲಯ 7–9 ಪಾಯಿಂಟ್ಸ್‌ಗಳಿಂದ ಜಯ ಸಾಧಿಸಿತು.

ಉಳಿದ ಪಂದ್ಯಗಳಲ್ಲಿ ಗುಂಟೂರಿನ ಆಚಾರ್ಯ ನಾಗಾರ್ಜುನ ವಿವಿ ವಿರುದ್ಧ ಸೇಲಂನ ಪೆರಿಯಾರ್ ವಿವಿ 5–9, ತಮಿಳುನಾಡಿನ ಸುಂದರ್‌ನಾಥ್ ವಿವಿ ವಿರುದ್ಧ ಕಣ್ಣೂರು ವಿವಿ 5–10, ತಮಿಳುನಾಡಿನ ಅವಿನಾಶಿಲಿಂಗಮ್‌ ಇನ್‌ಸ್ಟಿಟ್ಯೂಟ್ ಫಾರ್ ಹೋಮ್ ಸೈನ್ಸ್ ವಿರುದ್ಧ ಪುದುಚೇರಿ ವಿವಿ 7–11, ಮದ್ರಾಸ್‌ ವಿವಿ ವಿರುದ್ಧ ಆಂಧ್ರದ ಕೃಷ್ಣ ವಿವಿ 5–6, ಹೈದರಾಬಾದ್‌ನ ಒಸ್ಮಾನಿಯಾ ವಿವಿ ವಿರುದ್ಧ ಆಂಧ್ರ ವಿವಿ 4–5, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ವಿರುದ್ಧ ತಮಿಳುನಾಡಿನ ಮಧುರೈ ಕಾಮರಾಜ್ ವಿವಿ 4–16 ಪಾಯಿಂಟ್ಸ್‌ಗಳಿಂದ ಗೆಲುವು ದಾಖಲಿಸಿತು.

ಮಳೆ: ಟೂರ್ನಿ ಸ್ಥಳಾಂತರ

ಮಳೆಯ ಕಾರಣದಿಂದಾಗಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಕೊಕ್ಕೊ ಪಂದ್ಯಾವಳಿಯನ್ನು ಒಳಾಂಗಣ ಟೆನ್ನಿಸ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಟೂರ್ನಿಯ ಸಂಚಾಲಕ ಡಾ.ರೋಶನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಪ್ರೀಕ್ವಾರ್ಟರ್‌ ಪೈನಲ್‌ ಪಂದ್ಯಗಳನ್ನು ಒಳಾಂಗಣ ಕ್ರೀಡಾಂಗಣದಲ್ಲಿ ಆಡಿಸಲಾಗುತ್ತಿದೆ. ಹೊನಲು ಬೆಳಕಿನ ಪಂದ್ಯ ನಡೆಸಲು ಕ್ರಮ ತೆಗೆದುಕೊಳ್ಳಲಾಗಿದೆ. ಬುಧವಾರ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT