ಕಕ್ಕುಂಜೆ: 60 ಎಕರೆ ಹಡಿಲು ಭೂಮಿಯಲ್ಲಿ ಕೃಷಿ

ಉಡುಪಿ: ಉಡುಪಿ ತಾಲ್ಲೂಕಿನಾದ್ಯಂತ ಕೇದಾರೋತ್ಥಾನ ಟ್ರಸ್ಟ್‌ನಿಂದ ‘ಹಡಿಲು ಭೂಮಿ ಕೃಷಿ ಆಂದೋಲನ’ ನಡೆಯುತ್ತಿದ್ದು, ಕಕ್ಕುಂಜೆ ವ್ಯಾಪ್ತಿಯಲ್ಲಿ 60 ಎಕರೆಯಲ್ಲಿ ಸಾವಯವ ಪದ್ದತಿಯಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
ಭಾನುವಾರ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಕಕ್ಕುಂಜೆ ಬೈಲಿನಲ್ಲಿ ನಾಟಿ ಕಾರ್ಯಕ್ಕೆ ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ಶನಿವಾರ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್‌ನ ಸದಸ್ಯರು ನಾಟಿ ಪೂರ್ವಭಾವಿ ತಯಾರಿ ವೀಕ್ಷಿಸಿದರು.
ಮಹಿಳೆಯರು ನೇಜಿಯನ್ನು ಕಿತ್ತು ನಾಟಿಗೆ ಸಿದ್ಧಮಾಡಿಕೊಂಡರೆ, ಯಂತ್ರಗಳ ಸಹಾಯದಿಂದ ಭೂಮಿಯನ್ನು ಹಸನು ಮಾಡಿಕೊಳ್ಳುವ ಕಾರ್ಯ ನಡೆಯಿತು. ಊರಿನ ಹಿರಿಯರು, ಭೂಮಿಯ ಮಾಲೀಕರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ಸ್ಥಳೀಯ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಕೇದಾರೋತ್ಥಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸ್ಥಳೀಯರಾದ ಕಿರಣ್, ಉಮೇಶ್, ಸಂತೋಷ್, ಸುನೀಲ್, ರುಡಾಲ್ಫ್ ಇದ್ದರು.
ಕೈಪಿಡಿ ಬಿಡುಗಡೆ: ‘ಪ್ಲಾಸ್ಟಿಕ್ ರಹಿತ ದಿನ’ದ ಅಂಗವಾಗಿ ಅಂಬಲಪಾಡಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಭಿತ್ತಿಚಿತ್ರ ಹಾಗೂ ಇಲಾಖೆಯ ವಿವಿಧ ಕೈಪಿಡಿ, ಪುಸ್ತಕಗಳನ್ನು ಶಾಸಕ ರಘುಪತಿ ಭಟ್ ಬಿಡುಗಡೆ ಮಾಡಿದರು.
ಅಂಬಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷ ಬಿ.ಕೆ.ಸೋಮನಾಥ್, ಉಡುಪಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್, ಕಾರ್ಮಿಕ ಇಲಾಖೆಯ ನಿರೀಕ್ಷಕ ಪ್ರವೀಣ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತಿ, ಅಂಬಲಪಾಡಿ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ಆಹಾರದ ಕಿಟ್ ವಿತರಣೆ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಶನಿವಾರ ಕಟ್ಟಡ ಕಾರ್ಮಿಕರಿಗೆ ಶಾಸಕ ರಘುಪತಿ ಭಟ್ ಆಹಾರದ ಕಿಟ್‌ಗಳನ್ನು ವಿತರಿಸಿದರು.
ಉಡುಪಿ ತಾಲ್ಲೂಕು ಪಂಚಾಯಿತಿ ಇಒ ಮೋಹನ್ ರಾಜ್, ಕಾರ್ಮಿಕ ಇಲಾಖೆಯ ನಿರೀಕ್ಷಕ ಪ್ರವೀಣ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.