ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ: ‘ಹೊಳಪು 2024–ಗ್ರಾಮ ಸರ್ಕಾರದ ದಿಬ್ಬಣ’ಕ್ಕೆ ಸ್ಪೀಕರ್‌ ಖಾದರ್ ಚಾಲನೆ

Published 10 ಫೆಬ್ರುವರಿ 2024, 13:30 IST
Last Updated 10 ಫೆಬ್ರುವರಿ 2024, 13:30 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ಜನಪ್ರತಿನಿಧಿಗಳು ಒತ್ತಡದಿಂದ ಕೆಲಸ ನಿರ್ವಹಿಸಬೇಕಾದ ಅನಿರ್ವಾಯತೆ ಇದ್ದು, ಅವುಗಳಿಂದ ಹೊರಬರಲು ‘ಹೊಳಪು’ನಂತಹ ಕಾರ್ಯಕ್ರಮಗಳು ಸಹಕಾರಿ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

ಕೋಟತಟ್ಟು ಗ್ರಾಮ ಪಂಚಾಯಿತಿ, ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಶಿವರಾಮ ಕಾರಂತ ಜನ್ಮದಿನೋತ್ಸವ ಅಂಗವಾಗಿ ವಿವೇಕ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ನಡೆದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪಂಚಾಯತ್‌ ರಾಜ್‌ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ, ಸಾಂಸ್ಕೃತಿಕ ಸ್ಪರ್ಧೆ ‘ಹೊಳಪು 2024–ಗ್ರಾಮ ಸರ್ಕಾರದ ದಿಬ್ಬಣ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.‌

ಜನಪ್ರತಿನಿಧಿಗಳು ಜನರ ವಿಶ್ವಾಸಗಳಿಸಿ ಜನ ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ಪಕ್ಷ, ಜಾತಿ, ಮತ ಭೇದ ಬದಿಗಿಟ್ಟು ಕ್ರೀಡಾ, ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ. ಹೊಳಪು ಕಾರ್ಯಕ್ರಮದ ಮೂಲಕ ಭಾರತ, ಕರ್ನಾಟಕದ ಸಂಸ್ಕೃತಿಯನ್ನು ಕೋಟದಲ್ಲಿ ಕಾಣುವಂತಾಗಿದೆ ಎಂದರು.

ಶಾಸಕ ಗುರುರಾಜ್‌ ಶೆಟ್ಟಿ ಗಂಟಿಹೊಳೆ, ಕಾರ್ಯಕ್ರಮದ ರೂವಾರಿ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು. ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಶಾಸಕ ಡಾ.ಭರತ್‌ ವೈ.ಶೆಟ್ಟಿ ಪ್ರತಿಜ್ಞಾವಿಧಿ ಭೋದಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್ ಕ್ರೀಡಾಜ್ಯೋತಿ ಸ್ವೀಕರಿಸಿದರು. ಉಡುಪಿ ನಂದಿಕೂರಿನ ಅದಾನಿ ಪವರ್‌ ಯು.ಪಿ.ಸಿ.ಎಲ್‌ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ ಆಳ್ವ ಬಲೂನು ಹಾರಿ ಬಿಡುವುದರ ಮೂಲಕ ಕ್ರೀಡೆಗಳಿಗೆ ಚಾಲನೆ ನೀಡಿದರು. ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್‌ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್‌.ವಿ. ಇಬ್ರಾಹಿಂಪುರ, ಪ್ರಮುಖರಾದ ಬೆಳಪು ದೇವಿಪ್ರಸಾದ್‌ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಕೆರಾಡಿ, ಮಂಜುನಾಥ ಉಪಾಧ್ಯ, ಗಣೇಶ ಕಿಣಿ ಬೆಳ್ವೆ, ಗೀತಾಂಜಲಿ ಸುವರ್ಣ, ಯು.ಎಸ್‌.ಶೆಣೈ, ಶ್ಯಾಮಲಾ ಕುಂದರ್‌, ರಾಜೇಶ್‌ ಕಾವೇರಿ, ನಯನ ಗಣೇಶ, ವಿವೇಕ ಪಿಯು ಕಾಲೇಜು ಪ್ರಾಂಶುಪಾಲ ಜಗದೀಶ ನಾವುಡ ಇದ್ದರು. ಗೌರವಾಧ್ಯಕ್ಷ ಆನಂದ ಸಿ.ಕುಂದರ್ ಸ್ವಾಗತಿಸಿದರು. ಹರೀಶ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಸತೀಶ್‌ಚಂದ್ರ ಶೆಟ್ಟಿ ನಿರೂಪಿಸಿದರು.

ಗಮನ ಸೆಳೆದ ಹೊಳಪು ಕ್ರೀಡೋ ತ್ಸವ ಸಾಂಸ್ಕೃತಿಕ ಪಥಸಂಚಲನದ ದೃಶ್ಯಗಳು ಹೊಳಪು 1
ಗಮನ ಸೆಳೆದ ಹೊಳಪು ಕ್ರೀಡೋ ತ್ಸವ ಸಾಂಸ್ಕೃತಿಕ ಪಥಸಂಚಲನದ ದೃಶ್ಯಗಳು ಹೊಳಪು 1
ಗಮನ ಸೆಳೆದ ಹೊಳಪು ಕ್ರೀಡೋ ತ್ಸವ ಸಾಂಸ್ಕೃತಿಕ ಪಥಸಂಚಲನದ ದೃಶ್ಯಗಳು ಹೊಳಪು 2
ಗಮನ ಸೆಳೆದ ಹೊಳಪು ಕ್ರೀಡೋ ತ್ಸವ ಸಾಂಸ್ಕೃತಿಕ ಪಥಸಂಚಲನದ ದೃಶ್ಯಗಳು ಹೊಳಪು 2
ಗಮನ ಸೆಳೆದ ಹೊಳಪು ಕ್ರೀಡೋ ತ್ಸವ ಸಾಂಸ್ಕೃತಿಕ ಪಥಸಂಚಲನದ ದೃಶ್ಯಗಳು ಹೊಳಪು 3
ಗಮನ ಸೆಳೆದ ಹೊಳಪು ಕ್ರೀಡೋ ತ್ಸವ ಸಾಂಸ್ಕೃತಿಕ ಪಥಸಂಚಲನದ ದೃಶ್ಯಗಳು ಹೊಳಪು 3

ಉತ್ಸಾಹದಿಂದ ಪಾಲ್ಗೊಂಡ ಜನಪ್ರತಿನಿಧಿಗಳು 

ಜನಪ್ರತಿನಿಧಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸೂಪರ್ ಮಿನಿಟ್ ಗಾಯನ ಛದ್ಮವೇಷ ಕ್ರೀಡಾಸ್ಪರ್ಧೆಯಲ್ಲಿ 100 ಮೀ. ಓಟ 200 ಮೀ. ಓಟ ಶಾಟ್‌ಪಟ್‌ ರಿಂಗ್ ಇನ್ ದಿ ವಿಕೆಟ್ ಮಡಕೆ ಒಡೆಯವುದು ಗುಂಪು ಸ್ಪರ್ಧೆಯಲ್ಲಿ ಹಗ್ಗಜಗ್ಗಾಟ ಥ್ರೋಬಾಲ್ ಆಯೋಜಿಸಲಾಗಿತ್ತು. ಜನಪ್ರತಿನಿಧಿಗಳು ಉತ್ಸಾಹದಿಂದ ಪಾಲ್ಗೊಂಡರು. ಸ್ಪರ್ಧಾಳುಗಳಿಗೆ ಸಮವಸ್ತ್ರ ಟೋಪಿ ವಿತರಿಸಲಾಯಿತು.

ಅವಳಿ ಜಿಲ್ಲೆಗಳಿಂದ 378 ಗ್ರಾಮ ಪಂಚಾಯಿತಿ ಮಹಾನಗರ ಪಾಲಿಕೆ ನಗರ ಸಭೆ ಪುರಸಭೆಯ 17 ಜನಪ್ರನಿಧಿಗಳು 9 ಸಾವಿರ ಸಿಬ್ಬಂದಿ ಸಮ್ಮಿಲನಕ್ಕೆ ಹೊಳಪು ಸಾಕ್ಷಿಯಾಯಿತು.

ಗಮನಸೆಳೆದ ಪಥ ಸಂಚಲನ ಸ್ತಬ್ಧಚಿತ್ರ

ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಪಂಚಾಯತ್‌ ರಾಜ್‌ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ವಿವಿಧ ಸ್ತಬ್ಧಚಿತ್ರಗಳ ಪ್ರದರ್ಶನ ಯಕ್ಷಗಾನ ವೇಷ ಕೊರಗರ ಡೋಲು ವಾದನ ಕಂಬಳ ಕೋಣಗಳು ಕಹಳೆ ವಾದನ ಕೋಳಿಪಡೆ ಚಂದ್ರಯಾನ ಸ್ತಬ್ಧಚಿತ್ರ ಮರಾಠಿ ಸಮುದಾಯದ ಗುಮ್ಮಟೆ ಕಂಗೀಲು ರಾಜಮನೆತನ ಸಂವಿಧಾನ ಪೀಠಿಕೆ ಗ್ರಾಮೀಣ ಕುಲಕಸುಬು ಸಾಂಪ್ರದಾಯಿಕ ದಿರಿಸು ತೊಟ್ಟ ಜನಪ್ರತಿನಿಧಿಗಳ ತಂಡ ಪಥ ಸಂಚಲನಕ್ಕೆ ಮೆರುಗು ನೀಡಿದವು.

ಹನೆಹಳ್ಳಿಯ ಸೈನಿಕ ಶಾಲಾ ವಿದ್ಯಾರ್ಥಿಗಳ ಕವಾಯತು ಆವರ್ಸೆ ಪ್ರೌಢಶಾಲೆಯ ಸ್ಟೂಡೆಂಟ್‌ ಪೊಲೀಸ್‌ ವಿದ್ಯಾರ್ಥಿಗಳ ಪಥಸಂಚಲನ ಕಳ್ತೂರು ಸಂತೆಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕವಾಯತು ಗಮನ ಸೆಳೆದವು. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಪ್ರಯುಕ್ತ ಶ್ರೀರಾಮ ಮತ್ತು ಆಂಜನೇಯ ವೇಷ ಮೆಚ್ಚುಗೆಗೆ ಪಾತ್ರವಾಯಿತು. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಸಾಧನೆ ತೋರಿದ ಪಂಚಾಯಿತಿಗಳಿಗೆ ಪಥ ಸಂಚಲನದ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT