ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಕಳ: ಇಂಟರ್‍ಯಾಕ್ಟ್‌ ಕ್ಲಬ್ ಪದಗ್ರಹಣ

Published : 10 ಆಗಸ್ಟ್ 2024, 15:24 IST
Last Updated : 10 ಆಗಸ್ಟ್ 2024, 15:24 IST
ಫಾಲೋ ಮಾಡಿ
Comments

ಕಾರ್ಕಳ: ಇಲ್ಲಿನ ಸರ್ಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ಈಚೆಗೆ ಇಂಟರ್‍ಯಾಕ್ಟ್ ಕ್ಲಬ್‌ನ ಪದಪ್ರದಾನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರಾಗಿ ಸೃಜನ್ ಕುಮಾರ್ ಎಸ್, ಕಾರ್ಯದರ್ಶಿಯಾಗಿ ಸಾಯಿ ಶೆಟ್ಟಿ ಆಯ್ಕೆಯಾದರು.

ಪದಪ್ರದಾನ ನೆರವೇರಿಸಿದ ರೋಟರಿ ಸಂಸ್ಥೆ ಅಧ್ಯಕ್ಷ ಮಹಮದ್ ಇಕ್ಬಾಲ್ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಇಂಟರ್‍ಯಾಕ್ಟ್ ಚೇರ್‌ಮನ್ ಜ್ಯೋತಿ ಪದ್ಮನಾಭ ಮಾತನಾಡಿ, ವಿದ್ಯಾರ್ಥಿಗಳು ಸಮಸ್ಯೆ ಅರಿತುಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದರು.

ನಿವೃತ್ತ ಮುಖ್ಯಶಿಕ್ಷಕಿ ಹರ್ಷಿಣಿ ಕೆ. ಮಾತನಾಡಿ, ಉತ್ತಮ ಕೆಲಸ ಮಾಡಿದವರನ್ನು ಮಾದರಿಯನ್ನಾಗಿರಿಸಿಕೊಂಡು ವಿದ್ಯಾರ್ಥಿಗಳು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದರು.

ವಲಯ ಸೇನಾನಿ ಸುರೇಶ್ ನಾಯಕ್ ಪ್ಲಾಸ್ಟಿಕ್ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಗಣೇಶ ಸಾಲಿಯಾನ್, ಸದಸ್ಯರಾದ ನವೀನ್ ಶೆಟ್ಟಿ, ಬಾಲಕೃಷ್ಣ ದೇವಾಡಿಗ, ಸುಬ್ರಮಣ್ಯ ದೇವಾಡಿಗ ಇದ್ದರು. ಮುಖ್ಯಶಿಕ್ಷಕ ದಿವಾಕರ್ ಸ್ವಾಗತಿಸಿದರು. ವಿದ್ಯಾರ್ಥಿ ದಿಶಾ ನಿರೂಪಿಸಿದರು. ಪ್ರತೀಕ್ಷಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT