ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ | ನಮ್ಮ ನಾಡು ಒಕ್ಕೂಟ: ಪದಾಧಿಕಾರಿಗಳ ಆಯ್ಕೆ

Published 23 ಡಿಸೆಂಬರ್ 2023, 13:45 IST
Last Updated 23 ಡಿಸೆಂಬರ್ 2023, 13:45 IST
ಅಕ್ಷರ ಗಾತ್ರ

ಕಾರ್ಕಳ: ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ನಮ್ಮ ನಾಡು ಒಕ್ಕೂಟದ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಂಚಿಕಟ್ಟೆ ಎನ್.ಎಸ್ ಅಕಾಡೆಮಿಯಲ್ಲಿ ಈಚೆಗೆ ನಡೆಯಿತು.

ಅಧ್ಯಕ್ಷರಾಗಿ ಶಾಕಿರ್ ಹುಸೈನ್, ಕಾರ್ಯದರ್ಶಿಯಾಗಿ ಶೇಕ್ ಶಬ್ಬೀರ್ ಮಿಯಾರು, ಉಪಾಧ್ಯಕ್ಷರಾಗಿ ಮುಸ್ತಾಫ್, ಮುಷ್ತಾಕ್ ಅಹಮದ್, ಮೊಹಮ್ಮದ್ ನವಾಜ್, ಗೌರವಾಧ್ಯಕ್ಷರಾಗಿ ಸೈಯದ್ ಹಸನ್, ಜೊತೆ ಕಾರ್ಯದರ್ಶಿಯಾಗಿ ರಹೀಂ ತೆಲ್ಲಾರು, ಪತ್ರಿಕಾ ಕಾರ್ಯದರ್ಶಿಯಾಗಿ ಕೆಂ.ಎಂ. ಖಲೀಲ್, ಸಂಘಟನಾ ಕಾರ್ಯದರ್ಶಿಯಾಗಿ ಮೌಲಾನ ಹಫೀಸ್ ಸಾಹೇಬ್, ಯುವ ಘಟಕದ ಸಂಯೋಜಕರಾಗಿ ಅಬ್ದುಲ್ಲ ಶೇಕ್ ಆದಂ ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿ ಅಬ್ದುಲ್ ಖಾದರ್ ಮುಡುಪಾಡಿ, ಮುನಾವರ್ ಅಜೆಕಾರು ಪಳ್ಳಿ, ಉಸ್ಮಾನ್ ಗುಲ್ವಾಡಿ, ವೀಕ್ಷಕರಾಗಿ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT