ಕಾರ್ಕಳ: ತಾಲ್ಲೂಕಿನ ಬೈಲೂರು ಯರ್ಲಪಾಡಿಯ ಪರಶುರಾಮ ಥೀಮ್ ಪಾರ್ಕ್ನಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶದಂತೆ ಶುಕ್ರವಾರ ಸ್ವಚ್ಛತಾ ಕಾರ್ಯ ಆರಂಭಗೊಂಡಿತು.

ಶಾಸಕ ವಿ. ಸುನಿಲ್ ಕುಮಾರ್ ಅವರು ಪರಶುರಾಮಕು ಥೀಮ್ ಪಾರ್ಕ್ಗೆ ಈಚೆಗೆ ಭೇಟಿ ನೀಡಿ ಗಿಡಗಂಟಿ ಪೊದೆಗಳಿಂದ ಆವೃತವಾದ ಪಾರ್ಕ್ ಪರಿಸರವನ್ನು ಜಿಲ್ಲಾಡಳಿತ ಸ್ವಚ್ಛಗೊಳಿಸುವುದಾಗಿ ಮಾಧ್ಯಮ ಹೇಳಿಕೆ ನೀಡಿದ್ದರು. ಜಿಲ್ಲಾಡಳಿತ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಲಿಖಿತ ಆದೇಶ ನೀಡಿತ್ತು.

ಪಾರ್ಕ್ನಲ್ಲಿ ಸಿ.ಸಿ.ಟಿವಿ. ಕ್ಯಾಮೆರಾ ಅಳವಡಿಸುವುದು, ಭದ್ರತಾ ದೃಷ್ಟಿಯಿಂದ ಕಾವಲುಗಾರ ನಿಯೋಜಿಸುವುದು, ಅಧಿಕೃತ ವ್ತಕ್ಯಿಗಳನ್ನು ಹೊರತುಪಡಿಸಿ ಸಾರ್ವಜನಿಕ ಪ್ರವೇಶ ನಿಷೇಧ, ಥೀಮ್ ಪಾರ್ಕ್ ರಸ್ತೆಯಲ್ಲಿ ಸ್ವಚ್ಛತೆ, ಅಲ್ಲಿರುವ ಅಮೂಲ್ಯ ವಸ್ತುಗಳ ರಕ್ಷಣೆ, ಥೀಮ್ ಪಾರ್ಕ್ ಕಾಮಗಾರಿ ಮುಕ್ತಾಯಗೊಳ್ಳುವವರೆಗೆ ಸಂಪೂರ್ಣ ಜವಾಬ್ದಾರಿ ವಹಿಸುವಂತೆ ಆದೇಶಿಸಲಾಗಿದೆ.

ಥೀಮ್ ಪಾರ್ಕ್ ಪ್ರದೇಶಕ್ಕೆ ಯಾರಾದರೂ ಅತಿಕ್ರಮಣ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.