ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಪು ಕೈಪುಂಜಾಲು ಸಫರ್ ಝಿಯಾರತ್ ನಾಳೆ

Last Updated 20 ಸೆಪ್ಟೆಂಬರ್ 2022, 2:09 IST
ಅಕ್ಷರ ಗಾತ್ರ

ಕಾಪು: ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೈಪುಂಜಾಲ್ ಸಮುದ್ರ ಕಿನಾರೆಯಲ್ಲಿರುವ ಸಯ್ಯದ್ ಅರಭಿ ವಲಿಯುಲ್ಲಾರವರ ದರ್ಗಾದಲ್ಲಿ ವರ್ಷಂಪ್ರತಿ ನಡೆಸುತ್ತಾ ಬಂದಿರುವ ಸಫರ್ ಝಿಯಾರತ್ ಸಮಾರಂಭವು, ಸೆಪ್ಟಂಬರ್ ೨೧ರಂದು ನಡೆಯಲಿದೆ ಎಂದು ಸಮಿತಿ ಸದಸ್ಯ ಅಮೀರ್ ಹಂಝ ಹೇಳಿದ್ದಾರೆ.

ಅವರು ಕಾಪುವಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಾಪು-ಪೊಲಿಪು ಜಾಮಿಯಾ ಮಸೀದಿಯ ಆಡಳಿತಕ್ಕೆ ಒಳಪಟ್ಟ ಕೈಪುಂಜಾಲ್ ಸಯ್ಯದ್ ಅರಭಿ ವಲಿಯುಲ್ಲಾರವರ ದರ್ಗಾದಲ್ಲಿ ಸಫರ್ ಝಿಯಾರತ್ ಸಮಾರಂಭವು, ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ಸಾಂಕೇತಿಕವಾಗಿ ನಡೆಸಲಾಗಿತ್ತು. ಈ ಭಾರಿ ವಿಜೃಂಭಣೆಯಿಂದ ಸಫರ್ ಝಿಯಾರತ್ ನಡೆಯಲಿದೆ. ಬೆಳಿಗ್ಗೆ 6 ಗಂಟೆಗೆ, ಕಾಪು ಖಾಝಿ ಅಲ್ ಹಾಜ್ ಪಿ.ಬಿ.ಅಹ್ಮದ್ ಮುಸ್ಲಿಯಾರ್ ರವರು ದುಆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಂಜೆ 7 ಗಂಟೆ ತನಕ ನಡೆಯಲಿದೆ. ಈ ವಾರ್ಷಿಕ ಝಿಯಾರತ್ ಸಮಾರಂಭ ಅಲ್ಲದೇ ಬೇರೆ ದಿನಗಳಲ್ಲಿ ಅಲ್ಲಿಗೆ ಝಿಯಾರತ್ ಗೆ ಬರುವವರಿಗೆ ಸಂಜೆ ೬ಗಂಟೆ ತ ಅವಕಾಶ ಮಾತ್ರ ಇರುತ್ತದೆ.

ಕಾರ್ಯಕ್ರಮವನ್ನು ಪೊಲಿಪು ಜಾಮಿಯಾ ಮಸೀದಿಯ ಖತೀಬರಾದ ಮುಹಮ್ಮದ್ ಇರ್ಷಾದ್ ಸಅದಿಯವರು ಉದ್ಘಾಟಿಸಲಿದ್ದಾರೆ. ಪೊಲಿಪು ಜಾಮಿಯಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾದ ಅಬ್ದುಲ್ಲ ಸೂಪರ್ ಸ್ಟಾರ್, ಅವರ ಅಧ್ಯಕ್ಷತೆ ವಹಿಸಲಿದ್ದಾರೆ.

ದಿ.ಮಹಮ್ಮದ್ ರವರ ಮಗ ಸರ್ಫರಾಝ್ ರವರ ಉಸ್ತುವಾರಿಯಲ್ಲಿ ಈ ಬಾರಿ ಸಯ್ಯದ್ ಅರಭಿ ವಲಿಯುಲ್ಲಾ ರವರ ದರ್ಗಾದಲ್ಲಿ ಆಂತರಿಕ ಜೀರ್ಣೋದ್ಧಾರ ನಡೆದಿದ್ದು, ಜಾಗದ ಮಾಲೀಕರಾದ ನರೇಂದ್ರ ಶ್ರೀಯಾನ್ ಮತ್ತು ಗುಣವಂತ ಶ್ರೀಯಾನ್ ಹಾಗೂ ಕುಟುಂಬದವರು ತುಂಬು ಸಹಕಾರ ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎಚ್.ಅಬ್ದುಲ್ಲಾ, ಉಪಾಧ್ಯಕ್ಷ ರಜಬ್ ಹಾಜಿ ಮೈದಿನ್, ಇಮ್ತಿಯಾಝ್ ಅಹ್ಮದ್, ಕಾರ್ಯಕ್ರಮದ ಉಸ್ತುವಾರಿ ಸರ್ಫರಾಝ್, ಇಲ್ಯಾಸ್, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT