ಹೆಬ್ರಿ: ತಾಲ್ಲೂಕಿನ ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಳ್ಳೆಕಟ್ಟಿ ಅಂಗನವಾಡಿ ಕೇಂದ್ರಕ್ಕೆ ಸಿ.ಡಿ.ಪಿ.ಒ ವಿಜಯ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಗನವಾಡಿ ಸೋರುತ್ತಿರುವ ಬಗ್ಗೆ ದೂರಿನ ಹಿನ್ನಲೆಯಲ್ಲಿ ಅವರು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ತಹಶೀಲ್ದಾರ್ ಅವರಿಗೆ ವಿಪತ್ತು ನಿರ್ವಹಣಾ ಯೋಜನೆಯಲ್ಲಿ ದುರಸ್ತಿಪಡಿಸಲು ಅನುದಾನ ಕೋರಿ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಸ್ಟೋರ್ ರೂಂನಲ್ಲಿ ಸೋರಿಕೆಯಾಗಲು ಗುತ್ತಿಗೆದಾರರೇ ಹೊಣೆ. ವಿಪತ್ತು ನಿರ್ವಹಣಾ ಘಟಕದಿಂದ ಅನುದಾನ ಪಡೆದು ಏಕೆ ದುರಸ್ತಿ ಮಾಡಬೇಕು. ಸಂಬಂಧಪಟ್ಟ ಎಂಜಿನಿಯರ್ ಅವರನ್ನು ಹೊಣೆ ಮಾಡಿ ಅವರಿಂದ ವಸೂಲಿ ಮಾಡಿ ಎಂದು ಪೋಷಕರು ಒತ್ತಾಯಿಸಿದ್ದಾರೆ.
ಇಲಾಖೆ ಅಧಿಕಾರಿ ವಸಂತಿ, ಅಂಗನವಾಡಿ ಕಾರ್ಯಕರ್ತೆ ವಸಂತಿ ಎನ್. ಇದ್ದರು.