ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂದಾಪ್ರ ಕನ್ನಡ ಜನರ ನಾಡಿಮಿಡಿತ: ಜಯರಾಮ ಶೆಟ್ಟಿ

Published : 6 ಆಗಸ್ಟ್ 2024, 14:02 IST
Last Updated : 6 ಆಗಸ್ಟ್ 2024, 14:02 IST
ಫಾಲೋ ಮಾಡಿ
Comments

ಕೋಟ (ಬ್ರಹ್ಮಾವರ): ಕುಂದಾಪ್ರ ಭಾಷೆ ಜನರ ಭಾವನೆಯ ನಾಡಿಮಿಡಿತವಾಗಿದೆ. ಹಿಂಜರಿಕೆ ಹೊಂದದೆ ಕುಂದಾಪ್ರ ಭಾಷೆ ಬಳಸಬೇಕು. ಇಲ್ಲಿನ ಸಂಸ್ಕೃತಿ ವೈವಿಧ್ಯದ ಅನಾವರಣಕ್ಕೆ ವಿಶ್ವ ಕುಂದಾಪ್ರ ದಿನಾಚರಣೆ ಸಾಕ್ಷಿಯಾಗುತ್ತಿರುವುದು ಸಂತಸದ ವಿಷಯ ಎಂದು ಪ್ರಗತಿಪರ ಕೃಷಿಕ ಜಯರಾಮ ಶೆಟ್ಟಿ ಹೇಳಿದರು.

ಇಲ್ಲಿನ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಉಡುಪಿಯ ಶಿವರಾಮ ಕಾರಂತ ಟ್ರಸ್ಟ್, ಕೋಟ ಶಿವರಾಮ ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಕುಂದಾಪ್ರ ಕನ್ನಡ ಸಾಹಿತ್ಯ ಪರಿಷತ್ತು, ಯು–ಚಾನೆಲ್ ಆಶ್ರಯದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ‘ಕುಂದಾಪ್ರ ಕನ್ನಡ ಉತ್ಸವ–ಹೊಸ ಹೂಂಗು ಕೋಲೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಸತೀಶ ಕುಂದರ್, ಸಾಂಸ್ಕೃತಿಕ ಚಿಂತಕ ಪ್ರದೀಪ್ ಬಸ್ರೂರು, ಚಿತ್ರಕಲಾ ಶಿಕ್ಷಕ ಗಿರೀಶ ಆಚಾರ್ಯ ವಕ್ವಾಡಿ ಇದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಸತೀಶ ವಡ್ಡರ್ಸೆ ನಿರೂಪಿಸಿದರು. ಗಮ್ಜಾಲ್ ಹರಟೆ ತಂಡದಿಂದ ಹರಟೆ, ಮಕ್ಕಳಿಂದ ನಮ್ಮ ಕುಂದಾಪ್ರ ನಮ್ಮ ಸಂಪ್ರದಾಯ ದೃಶ್ಯ ಕಥನ, ಕುಂದಾಪ್ರ ಕನ್ನಡ ಕವಿಗೋಷ್ಠಿ ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT