ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾ‍ಪ್ರ ಕನ್ನಡದಲ್ಲಿ ಹಿಮನಾಡಿನ ಕಂಪು

ಬೈಕಿನಲ್ಲಿ ಲಡಾಕ್‌ಗೆ ಪ್ರಯಾಣ
Last Updated 21 ಜೂನ್ 2022, 16:57 IST
ಅಕ್ಷರ ಗಾತ್ರ

ಕುಂದಾಪುರ: ಮಲೆನಾಡಿನ ಗ್ರಾಮೀಣ ಭಾಗವಾದ ಕೊಲ್ಲೂರಿನಿಂದ ತನ್ನ ರಾಯಲ್ ಎನ್ಫಿಲ್ಡ್ ಹಿಮಾಲಯನ್ ಬೈಕಿನ ಮೂಲಕ ಪ್ರಯಾಣ ಆರಂಭಿಸಿರುವಕೊಲ್ಲೂರಿನ ಯುವಕ ಜೀತೇಂದ್ರ ಕುಮಾರ್ ಲೇಹ್ ಸೇರಿದಂತೆ ಲಡಾಕ್ ನಗರದ ವಿವಿಧ ಪ್ರವಾಸ ತಾಣಗಳ ಸುತ್ತುತ್ತ ತನ್ನ ವ್ಲಾಗಿಂಗ್ ಅನುಭವಗಳನ್ನು ಕುಂದಾಪ್ರ ಕನ್ನಡದಲ್ಲಿಯೇ ಹಂಚಿಕೊಳ್ಳುತ್ತ ಗಮನ ಸೆಳೆಯುತ್ತಿದ್ದಾರೆ.

ಕೊಲ್ಲೂರಿನ ಜಯಾನಂದ ಹಾಗೂ ಪ್ರೇಮ ದಂಪತಿ ಪುತ್ರ ಜೀತೇಂದ್ರ, ವ್ಲಾಗಿಂಗ್ ಹವ್ಯಾಸ ಹೊಂದಿದ್ದು, ಆಗಾಗ್ಗೆ ಸೋಲೊ ಹಾಗೂ ಸ್ನೇಹಿತರೊಂದಿಗೆ ಮೊಲೊ ವ್ಲಾಗ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಬೈಕ್‌ನಲ್ಲಿ ತೆರಳಿರುವ ಅವರು ದೇಶದ ವಿವಿಧ ಭಾಗಗಳಿಗೆ ತೆರಳಿ ಕುಂದಾಪ್ರ ಕನ್ನಡದ ಕಂಪನ್ನು ಅರಳುಸುತ್ತಿದ್ದಾರೆ.

ಚಂಡೀಗಢ ಮಾರ್ಗವಾಗಿ ತೆರಳಿ ಲೇಹ್ ತಲುಪಿರುವ ಜಿತೇಂದ್ರ, ಭಾರತದ ಎತ್ತರದ ಮೋಟೊರೆಬಲ್ ತಾಣವಾದ ಕಾರ್ದುಂಗ್ಲಾ ಲಾ ಹಾಗೂ ಇತರ ಪ್ರವಾಸಿ ತಾಣಗಳಿಗೆ ತೆರಳಿ ಬಳಿಕ ಶ್ರೀನಗರ ಮೂಲಕ ಮರಳಿ ಊರಿನ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.

‘ನಮ್ಮ ಕುಂದಾಪ್ರ’ ಎಂಬ ಟೀಶರ್ಟ್ ಧರಿಸಿ ರೈಡ್ ಮಾಡುತ್ತಿರುವ ಅವರು, ತಾವು ಕಂಡ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು, ಕುಂದಾಪುರ ಕನ್ನಡದಲ್ಲಿ ನೀಡುತ್ತಿರುವ ವೀಕ್ಷಣೆಯ ಸ್ಥಳಗಳ ವ್ಲಾಗಿಂಗ್ ಎಲ್ಲರ ಗಮನ ಸೆಳೆಯುತ್ತಿದೆ.

ವಿವಿಧ ಕಿರುಚಿತ್ರಗಳಲ್ಲಿ ನಟನೆ, ಸಂಕಲನದ ಮೂಲಕವೂ ಗುರುತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT