ಸೌಮ್ಯಾ ಎಂಬಾಕೆ ಪರಿಚಯ ಮಾಡಿಕೊಂಡು ತಾನು ಕಷ್ಟದಲ್ಲಿ ಇದ್ದೇನೆ ಎಂದು ಪದೇ ಪದೇ ಕೇಳಿದಾಗ, ಮಾನವೀಯತೆ ದೃಷ್ಟಿಯಿಂದ ಆಕೆಯನ್ನು ನಂಬಿ, ತನ್ನಲ್ಲಿದ್ದ ₹1.5ಲಕ್ಷ, 80 ಗ್ರಾಂ ತೂಕದ ಚಿನ್ನದ ನಕ್ಲೆಸ್, 2 ಉಂಗುರ, ಒಂದು ಸರ ಎರಡು ಪೆಂಡೆಂಟ್, ಮೂರು ಜೊತೆ ಕಿವಿಯೋಲೆಯನ್ನು ನೀಡಿರುವುದಾಗಿ ಮಮತಾ ಅವರು ದೂರಿನಲ್ಲಿ ತಿಳಿಸಿದ್ದಾರೆ.