ಭಾನುವಾರ, ಜುಲೈ 3, 2022
24 °C

ಶಿರ್ವ: ಸಿಡಿಲು ಬಡಿದು ಮನೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರ್ವ: ಕುರ್ಕಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಟಕಲ್ಲು ಸಮೀಪದ ದುರ್ಗಾನಗರ ನಿವಾಸಿ ಡೇನಿಸ್ ಡಿಸೋಜ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ವಿದ್ಯುತ್ ಸ್ವಿಚ್, ಟಿ.ವಿ, ಫ್ಯಾನ್‍ಗಳು, ಶೋಕೇಸ್, ವೈರಿಂಗ್ ಸುಟ್ಟುಹೋಗಿವೆ. ಮನೆಯ ಗೋಡೆ ಬಿರುಕು ಬಿಟ್ಟಿದೆ.

ಡೇನಿಸ್ ಡಿಸೋಜ ಅವರ ತಲೆ, ಮೈಕೈಗಳಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯಿಂದ ₹ 45 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕುರ್ಕಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಶೆಟ್ಟಿ, ಉಪಾಧ್ಯಕ್ಷೆ ಸಿಮ್ಮಿ ಮಾರ್ಗರೆಟ್ ಡಿಸೋಜ, ವಾರ್ಡ್ ಸದಸ್ಯೆ ಸರೋಜಾ ಪೂಜಾರಿ, ಗ್ರಾಮ ಕರಣಿಕ ಲೆಸ್ಟನ್, ಪಂಚಾಯಿತಿ ಸಿಬ್ಬಂದಿ ಸತೀಶ್ ಪೂಜಾರಿ, ನತಾಲಿಯನ್ ಮಾರ್ಟಿಸ್‌ ಭೇಟಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು