ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಲೋಕ ಅದಾಲತ್‌: 91 ಲಕ್ಷ ವಿಮಾ ಪರಿಹಾರ

ರಾಜಿ ಸಂಧಾನದ ಮೂಲಕ ಒಂದಾದ ಹಿರಿಯ ದಂಪತಿ
Published 10 ಸೆಪ್ಟೆಂಬರ್ 2023, 6:07 IST
Last Updated 10 ಸೆಪ್ಟೆಂಬರ್ 2023, 6:07 IST
ಅಕ್ಷರ ಗಾತ್ರ

ಉಡುಪಿ: ಅಪಘಾತ ಪ್ರಕರಣದಲ್ಲಿ ಮೃತ ವ್ಯಕ್ತಿಯ ಕುಟುಂಬಕ್ಕೆ 91 ಲಕ್ಷ ನೀಡಲು ಯುನಿವರ್ಸಲ್‌ ಸೊಂಒ ಜನರಲ್‌ ಇನ್ಶುರೆನ್ಸ್ ವಿಮಾ ಸಂಸ್ಥೆಯು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನ ಮಾಡಿಕೊಂಡಿದೆ.

ಉಡುಪಿ ನಗರಸಭೆಯ ಉದ್ಯೋಗಿಯೊಬ್ಬರು 2021 ಜ.16ರಂದು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತರ ಕಡೆಯವರು ಉಡುಪಿಯ ಪ್ರಧಾನ ಸಿವಿಲ್ ಜಡ್ಜ್‌ ನ್ಯಾಯಾಲಯದಲ್ಲಿ ವಿಮಾ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಅಪಘಾತ ಮಾಡಿದ ಕಾರಿನ ವಿಮೆಯು ಯುನಿವರ್ಸಲ್‌ ಸೊಂಪೊ ಇನ್ಸೂರೆನ್ಸ್‌ ಸಂಸ್ಥೆಗೆ ಒಳಪಟ್ಟಿತ್ತು.

ಈ ಸಂಬಂಧ ಪ್ರಕರಣದಲ್ಲಿ ವಕೀಲರ ಅಭಿಪ್ರಾಯ ಪಡೆದ ವಿಮಾ ಕಂಪೆನಿಯು ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಲು ನಿರ್ಧರಿಸಿತು. ಅದರಂತೆ ಅರ್ಜಿದಾರರು ಹಾಗೂ ವಿಮಾ ಕಂಪನಿಯು ರಾಜಿ ಸಂಧಾನ ಪತ್ರಕ್ಕೆ ಸಹಿ ಹಾಕಿದ್ದು 91 ಲಕ್ಷ ಪರಿಹಾರ ನೀಡಲು ಒಪ್ಪಿಕೊಳ್ಳಲಾಗಿದೆ.

ಜಿಲ್ಲಾ ಮಟ್ಟದ ಲೋಕ್‌ ಅದಾಲತ್‌ನಲ್ಲಿ ಖಾಸಗಿ ವಿಮಾ ಸಂಸ್ಥೆ ದೊಡ್ಡಮೊತ್ತದ ಪರಿಹಾರ ನೀಡಲು ಒಪ್ಪಿರುವುದು ಇದೇ ಮೊದಲ ಪ್ರಕರಣವಾಗಿದೆ ಎಂದು ವಿಮಾ ಸಂಸ್ಥೆಯ ವಕೀಲರಾದ ಆನಂದ್ ಮಡಿವಾಳ ತಿಳಿಸಿದ್ದಾರೆ.

ಸಂಧಾನದಲ್ಲಿ ಒಂದಾದ ಹಿರಿಯ ದಂಪತಿ:

ಜೀವನದಲ್ಲಿ ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದ 64 ವರ್ಷದ ಪತಿ ಹಾಗೂ 52 ವರ್ಷದ ಪತ್ನಿ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಹಾಗೂ ವಕೀಲರ ಮಧ್ಯೆಸ್ಥಿಕೆಯಲ್ಲಿ ಭಿನ್ನಾಭಿಪ್ರಾಯ ಮರೆತು ಒಂದಾಗಲು ನಿರ್ಧರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT