ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಕೊಡಗಿನ ಯುವತಿ ಸಮುದ್ರದಲ್ಲಿ ನಾಪತ್ತೆ

ಮೂವರನ್ನು ರಕ್ಷಿಸಿದ ಮೀನುಗಾರರು, ಒಬ್ಬನ ಸ್ಥಿತಿ ಗಂಭೀರ
Last Updated 1 ಆಗಸ್ಟ್ 2021, 15:49 IST
ಅಕ್ಷರ ಗಾತ್ರ

ಉಡುಪಿ: ಮಲ್ಪೆ ಬೀಚ್‌ನಲ್ಲಿ ಈಜುವಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಡಗು ಜಿಲ್ಲೆಯ ಅಮ್ಮತ್ತಿಯ ಯು.ಜೆ.ದೇಚಮ್ಮ (20) ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ದೇಚಮ್ಮ ಜತೆಗೆ ಸಮುದ್ರಕ್ಕಿಳಿದು ಅಪಾಯಕ್ಕೆ ಸಿಲುಕಿದ್ದ ಎಂ.ಯು.ಶೈನಿ, ನವ್ಯ ಮಂದಣ್ಣ ಹಾಗೂ ನಿಖಿಲ್ ಗೌಡ ಎಂಬುವರನ್ನು ಮೀನುಗಾರರು ರಕ್ಷಿಸಿದ್ದಾರೆ. ನಿಖಿಲ್ ಗೌಡ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿವರ: ಮೈಸೂರಿನ ವಿಜಯಪುರದ ಎಂ.ಯು.ಶೈನಿ ಸ್ನೇಹಿತರಾದ ನವ್ಯ ಮಂದಣ್ಣ, ನಿಖಿಲ್ ಗೌಡ, ದೇಚಮ್ಮ ಅವರ ಜತೆ ಶನಿವಾರ ಮಲ್ಪೆ ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದರು. ಇಲ್ಲಿನ ಬ್ಲೂಬೇ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಸ್ನೇಹಿತರು ಭಾನುವಾರ ಸಮುದ್ರಕ್ಕಿಳಿದಾಗ ಅಲೆಗಳ ಸೆಳೆತಕ್ಕೆ ಸಿಲುಕಿದ್ದರು.

ಸ್ಥಳೀಯರು ಹಾಗೂ ಬೀಚ್‌ನ ಸಿಬ್ಬಂದಿ ಸಮುದ್ರದಾಳಕ್ಕೆ ಹೋಗದಂತೆ ಎಚ್ಚರಿಕೆ ನೀಡಿದರೂ ಕಡೆಗಣಿಸಿದ್ದರಿಂದ ದುರಂತ ಸಂಭವಿಸಿದೆ ಎಂದು ಮಲ್ಪೆ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT