ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಭಾರ ಎತ್ತುವ ಸ್ಪರ್ಧೆ 2024–25ರಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡ ಸಮಗ್ರ ಪ್ರಶಸ್ತಿ ಜಯಿಸಿತು.

ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆ ಪ್ರಥಮ, ಎಸ್ಡಿಎಂ ಕಾಲೇಜು ಉಜಿರೆ ದ್ವಿತೀಯ, ಸೇಂಟ್ ಫಿಲೋಮಿನಾ ಕಾಲೇಜು ಪುತ್ತೂರು ತೃತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಪ್ರಥಮ, ಸೇಂಟ್ ಫಿಲೋಮಿನಾ ಕಾಲೇಜು ದ್ವಿತೀಯ, ಎಸ್ಡಿಎಂ ಕಾಲೇಜು ತೃತೀಯ ಪ್ರಶಸ್ತಿ ಪಡೆದವು.

ಪುರುಷರ ವಿಭಾಗದ ಬೆಸ್ಟ್ ಲಿಫ್ಟರ್ ಆಗಿ ಆಳ್ವಾಸ್ನ ಪ್ರಶಾಂತ್ ಸಿನ್ಹಾ, ಮಹಿಳಾ ವಿಭಾಗದಲ್ಲಿ ಸೇಂಟ್ ಫಿಲೋಮಿನಾದ ಸ್ಪಂದನಾ ಕೆ. ಅವರು ಹೊರಹೊಮ್ಮಿದರು.

ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲ ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜ, ಉಡುಪಿ ಜಿಲ್ಲಾ ವೇಟ್ ಲಿಫ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ್ ಎಚ್, ಹೆಸ್ಕತ್ತೂರ್ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಯಪ್ರಸಾದ್ ಶೆಟ್ಟಿ, ಸ್ಪರ್ಧಾ ಕೂಟದ ವೀಕ್ಷಕ ಹರೀಶ್ ಗೌಡ, ತರಬೇತುದಾರ ಉದಯ್ ಕುಮಾರ್ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕಿ ವನಿತಾ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಶಂಕರ ನಾರಾಯಣ ವಂದಿಸಿದರು. ವಿದ್ಯಾರ್ಥಿ ಸುಮಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.