ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ 48 ಕಿ.ಮೀ ಮ್ಯಾರಥಾನ್‌

ಫಿಟ್ ರಹೊ ಘೋಷವಾಕ್ಯದೊಂದಿಗೆ ನೇಷನ್ ಫಸ್ಟ್‌ ಸಂಸ್ಥೆಯಿಂದ 78 ಕಿ.ಮೀ ಓಟ
Last Updated 6 ಸೆಪ್ಟೆಂಬರ್ 2021, 17:10 IST
ಅಕ್ಷರ ಗಾತ್ರ

ಉಡುಪಿ: ‘ಫಿಟ್ ರಹೊ ಉಡುಪಿ’ ಘೋಷವಾಕ್ಯದೊಂದಿಗೆ ನೇಶನ್ ಫಸ್ಟ್‌ನ 75 ಕಿ.ಮೀ ಮ್ಯಾರಥಾನ್ ಓಟಕ್ಕೆ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು, ಉಡುಪಿ ಚರ್ಚ್‌ನ ಧರ್ಮಗುರು ಚಾರ್ಲ್ಸ್ ಮ್ಯಾನೇಜಸ್ ಹಾಗೂ ಶಾಸಕ ಕೆ.ರಘುಪತಿ ಭಟ್ ಸೋಮವಾರ ನಗರದ ಕ್ಲಾಕ್ ಟವರ್ ಬಳಿ ಹಸಿರು ನಿಶಾನೆ ತೋರಿಸಿದರು.

ಮ್ಯಾರಥಾನ್ ಮನೋಳಿಗುಜ್ಜಿ ತಲುಪುತ್ತಿದ್ದಂತೆ ದೊಡ್ಡಣಗುಡ್ಡೆ ಮಸೀದಿಯ ಧರ್ಮಗುರು ನಜೀರ್ ಅಹಮ್ಮದ್ ಆಶೀರ್ವರ್ಚನ ನೀಡಿ ಶುಭ ಹಾರೈಸಿದರು. ಮ್ಯಾರಥಾನ್ ಮಣಿಪಾಲ ತಲುಪಿದಾಗ ಮಾಹೆ ಕುಲಪತಿ ಎಂ.ಡಿ.ವೆಂಕಟೇಶ್ ಹಾಗೂ ಸಹ ಕುಲಾಧಿಪತಿ ಎಚ್.ಎಸ್. ಬಲ್ಲಾಲ್ ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿದರು.

ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಶುಭ ಕೋರಿದರು. ಪಂಡರಿನಾಥ ಭಜನಾ ಮಂದಿರ ಸಮೀಪ ಮ್ಯಾರಥಾನ್‌ಗೆ ಪಂಡರಿನಾಥ ಭಜನಾ ಮಂದಿರದ ಉಪಾಧ್ಯಕ್ಷ ಭುವನ್ ಕೋಟ್ಯಾನ್ ಹಾಗೂ ಕರಾವಳಿ ಕಾವಲು ಪಡೆಯ ಹೆಚ್ಚುವರಿ ಎಸ್‌ಪಿ ಸುಲ್ಫಿ ತುಳಜಪ್ಪ ಶುಭ ಹಾರೈಸಿದರು.

ಮೊದಲ ದಿನವಾದ ಸೋಮವಾರ ನೇಶನ್ ಫಸ್ಟ್ ತಂಡದ ಮ್ಯಾರಥಾನ್ 48 ಕಿ.ಮೀ ಪೂರೈಸಿ ಪಡುಕೆರೆ ಬಾಲಾಂಜನೇಯ ಭಜನಾ ಮಂದಿರ ಬಳಿ ಮುಕ್ತಾಯವಾಗಿದೆ. ಮಂಗಳವಾರ 27 ಕೀ.ಮೀ ಮ್ಯಾರಥಾನ್ ನಡೆಯಲಿದ್ದು, ಮಲ್ಪೆ ಬೀಚ್‌ನ ಗಾಂಧಿ ಪ್ರತಿಮೆಯಿಂದ ಕದಿಕೆ ಸನ್ಯಾಸಿ ಮಠ ಸರ್ಕಲ್, ಸಂತೆಕಟ್ಟೆ ಸರ್ಕಲ್, ಲಕ್ಷ್ಮೀನಗರ ಬಸ್ ಸ್ಟ್ಯಾಂಡ್, ಮಲ್ಪೆ ಪೊಲೀಸ್ ಸ್ಟೇಷನ್ ಬಳಿ, ಆದಿ ಉಡುಪಿ ಜಂಕ್ಷನ್, ಕಿದಿಯೂರು ನಿಸರ್ಗ ಸ್ಪೋರ್ಟ್ಸ್ ಕ್ಲಬ್, ಅಂಬಲಪಾಡಿ ಬೈಪಾಸ್‌ ಮೂಲಕ ಸಾಗಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ.

ಮ್ಯಾರಥಾನ್‌ಗೆ ಚಾಲನೆ ನೀಡಿದ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಕೆಂಪರಾಜ್, ಮಾಜಿ ಅಧ್ಯಕ್ಷ ಅಶೋಕ್ ಅಡ್ಯಂತಾಯ, ಎನ್.ಇ.ಬಿ ಸ್ಪೋರ್ಟ್ಸ್ ಎಂಟರ್‌ಟೇನ್ಮೆಂಟ್‌ನನ ನಾಗರಾಜ್ ಅಡಿಗ, ನೇಶನ್ ಫಸ್ಟ್ ತಂಡದ ಮೇಜರ್ ಪ್ರಕಾಶ್ ರಾವ್ ಹಾಗೂ ಸೂರಜ್ ಕಿದಿಯೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT