ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಗಾಂಧೀಜಿಯ ತತ್ವಗಳ ಜೀವನ ಶಿಕ್ಷಣ ಇಂದಿನ ಅಗತ್ಯ

ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ.ಮಹಾಬಲೇಶ್ವರ ರಾವ್‌
Last Updated 2 ಅಕ್ಟೋಬರ್ 2020, 13:28 IST
ಅಕ್ಷರ ಗಾತ್ರ

ಉಡುಪಿ: ಮಹಾತ್ಮಾ ಗಾಂಧೀಜಿ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಾದ ಅನಿವಾರ್ಯತೆ ಇಂದಿನ ತುರ್ತು ಎಂದು ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ.ಮಹಾಬಲೇಶ್ವರ ರಾವ್‌ ಅಭಿಪ್ರಾಯಪಟ್ಟರು.

ಗಾಂಧಿ ಅಧ್ಯಯನ ಕೇಂದ್ರ, ಎಂಜಿಎಂ ಕಾಲೇಜು ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಾಂಧೀಜಿಯ ಕುರಿತು ಇಂದಿನ ವಿದ್ಯಾರ್ಥಿಗಳಿಗೆ ಮಾಹಿತಿಯ ಕೊರತೆ ಇದೆ. ಅದನ್ನು ನೀಗಿಸುವ ಕೆಲಸಗಳು ನಡೆಯಬೇಕು’ ಎಂದರು.

ಪಠ್ಯದಲ್ಲಿ ಗಾಂಧೀಜಿ ಆತ್ಮಚರಿತ್ರೆಯನ್ನು ತಾತ್ಸಾರದಿಂದ ಓದಬಾರದು. ಕೇವಲ ಪರೀಕ್ಷೆಯ ದೃಷ್ಟಿಯಿಂದ ಗಾಂಧಿಯನ್ನು ಓದದೆ, ಬದುಕಿಗೆ ದಾರಿದೀಪವಾಗಬಲ್ಲ ಅವರ ಸಿದ್ಧಾಂತ ಹಾಗೂ ಮೌಲ್ಯಗಳನ್ನು ಒಳಗೊಂಡ ಜೀವನ ಶಿಕ್ಷಣ ಪಡೆಯಬೇಕು. ಸರ್ವ–ಧರ್ಮ, ಸಮ–ಭಾವ, ಸಮಾನತೆ, ಸತ್ಯ ಅಹಿಂಸೆಯ ತತ್ವಗಳನ್ನು ಪಾಲಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್‌ ಎಸ್‌.ನಾಯಕ್‌ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ನಾಲ್ವರು ಮಹನೀಯರಾದ ಗಾಂಧೀಜಿ, ಅಂಬೇಡ್ಕರ್, ಬಸವಣ್ಣ ಹಾಗೂ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳಿಗೆ ಮಹತ್ವವಿದೆ. ಗಾಂಧೀಜಿಯ ಸತ್ಯ–ಅಹಿಂಸೆ, ಅಂಬೇಡ್ಕರ್ ಅವರ ಸಮಾನತೆ, ಬಸವಣ್ಣನವರ ಕಾಯಕ ಹಾಗೂ ಸ್ವಾಮಿ ವಿವೇಕಾನಂದರ ದೇಶಭಕ್ತಿ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಈ ನಾಲ್ವರು ದಾರ್ಶನಿಕರ ವಿಚಾರಗಳಿಗೆ ಸಾವಿಲ್ಲ; ಜೀವನದ ಎಲ್ಲ ಸಮಸ್ಯೆಗಳಿಗೂ ಉತ್ತರ ಕಂಡುಕೊಳ್ಳಲು ಸಾಧ್ಯ ಎಂದರು‌

ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಡಾ.ವಿನೀತ್ ರಾವ್ ಮಾತನಾಡಿ, ‘ಪ್ರಸ್ತುತ ನಾವೆಲ್ಲ ಸಂದಿಗ್ಧತೆಯ ಸನ್ನಿವೇಶದಲ್ಲಿ ಸಿಲುಕಿದ್ದು, ಕೊರೊನಾ ಮಹಾಮಾರಿ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಚೀನಾದ ಯುದ್ಧೋನ್ಮಾದ ಹೆಚ್ಚಾಗಿದೆ, ದೇಶದೊಳಗೆ ಮಾದಕ ವ್ಯಸನಗಳ ಪಿಡುಗು ತಾಂಡವವಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಗಾಂಧಿ ತತ್ವಗಳ ಅನುಸರಣೆ ಅಗತ್ಯ. ಎಲ್ಲ ಸಮಸ್ಯೆಗಳಿಗೂ ಗಾಂಧಿ ತತ್ವಗಳು ಪರಿಹಾರವಾಗಬಲ್ಲವು ಎಂದರು. ಇದೇವೇಳೆ ಲಾಲ್‌ ಬಹದ್ದೂರು ಶಾಸ್ತ್ರೀಜಿ ಅವರನ್ನು ಸ್ಮರಿಸಿದರು.

ಎಂಜಿಎಂ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಮಾಲತಿ ದೇವಿ ಇದ್ದರು. ಸ್ಮಿತಾ ಪ್ರಾರ್ಥಿಸಿದರು. ಉಪನ್ಯಾಸಕ ಪ್ರಶಾಂತ್ ಉದ್ಯಾವರ ವಂದಿಸಿದರು. ಸುಚಿತ್ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT