ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಾವರ ಗ್ರಾ.ಪಂ: ಪೇಜಾವರ ಶ್ರೀಗಳ ಸ್ಮೃತಿವನಕ್ಕೆ ₹ 2 ಕೋಟಿ

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಭಟ್‌
Last Updated 11 ಆಗಸ್ಟ್ 2021, 5:08 IST
ಅಕ್ಷರ ಗಾತ್ರ

ಬ್ರಹ್ಮಾವರ: ‘ನೀಲಾವರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾದ ಪೇಜಾವರ ಶ್ರೀಗಳ ಸ್ಮೃತಿವನಕ್ಕೆ ಸರ್ಕಾರ ಈಗಾಗಲೇ ₹2 ಕೋಟಿ ಅನುದಾನ ನೀಡಿದೆ’ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.

ನೀಲಾವರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಕೋವಿಡ್ ವಾರಿಯರ್ಸ್‌ಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆ ₹25 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ವಾರಾಹಿ ನೀರಾವರಿ ಯೋಜನೆಯಿಂದ 2023 ರೊಳಗೆ ಉಡುಪಿ ವಿಧಾನಸಭಾ ಕ್ಷೇತ್ರದ 19 ಗ್ರಾಮ ಪಂಚಾಯಿತಿಗಳ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು ಎಂದರು.

ಬ್ರಹ್ಮಾವರದಿಂದ ಹೆಬ್ರಿ ಸಂತೆಕಟ್ಟೆಯ ವರಿಗೆ ರಸ್ತೆಯನ್ನು ₹55 ಕೋಟಿ ವೆಚ್ಚದಲ್ಲಿ ಚತುಷ್ಟಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗುವುದು. ರಸ್ತೆ ಬದಿಯಲ್ಲಿ 10 ಸಾವಿರ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಚತುಷ್ಪಥ ರಸ್ತೆಗಾಗಿ ಯಾವುದೇ ಭೂಸ್ವಾಧೀನ ಮಾಡದೆ ದಾನಿಗಳ ಸಹಕಾರದಿಂದ ರಸ್ತೆ ಆಗುತ್ತಿರುವುದು ವಿಶೇಷ ಎಂದು ಹೇಳಿದರು.

ರಸ್ತೆ ಅಭಿವೃದ್ಧಿಗೆ ಜಾಗವನ್ನು ಬಿಟ್ಟುಕೊಟ್ಟ ಬಾಲಕೃಷ್ಣ ಶೆಟ್ಟಿ, ಗಣೇಶ್ ಪೈ, ಮಂಜುನಾಥ ನಾಯ್ಕ ಮತ್ತು ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ನಿವೃತ್ತಿ ಹೊಂದಿದ ಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ಕೋವಿಡ್ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರಾದ ಸುಮತಿ, ಕವಿತಾ, ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರಾದ ವೀಣಾ ಮತ್ತು ಶಶಿಕಲಾ ಅವರನ್ನು ಗೌರವಿಸಲಾಯಿತು. ಪಂಚಾಯಿತಿ ವ್ಯಾಪ್ತಿಯ ಅಸೌಖ್ಯದಿಂದ ಬಳಲುತ್ತಿರುವವರಿಗೆ ದಾನಿಗಳ ಮುಖಾಂತರ ಸಂಗ್ರಹಿಸಿದ ಸಹಾಯಧನವನ್ನು ವಿತರಿಸಲಾಯಿತು.

ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶುಚಿಕಿತ್ಸಾ ಆಸ್ಪತ್ರೆಯನ್ನು ನಿರ್ಮಿಸುವಂತೆ ಶಾಸಕ ಭಟ್ ಅವರಿಗೆ ಮನವಿ ನೀಡಲಾಯಿತು. ಹಿಂದೂ ಸ್ಮಶಾನ ನಿರ್ಮಿಸಲು ಅನುದಾನ ನೀಡಿದ ಮನವಿಗೆ ಸ್ಪಂದಿಸಿದ ಶಾಸಕರು ತಮ್ಮ ಶಾಸಕರ ನಿಧಿಯಿಂದ ₹5 ಲಕ್ಷ ನೀಡುವುದಾಗಿ ಭರವಸೆನೀಡಿದರು.

ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ, ನೀಲಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಕುಮಾರ್, ಉಪಾಧ್ಯಕ್ಷೆ ಬೇಬಿ ಎಸ್, ರಾಜ್ಯ ಬಿಜೆಪಿ ಎಸ್.ಟಿ ಮೋರ್ಚಾದ ಕಾರ್ಯದರ್ಶಿ ಉಮೇಶ್ ನಾಯ್ಕ, ತಾಲ್ಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಂದ್ರ ಅಡಿಗ, ನೀಲಾವರ ಮಹಿಷಮರ್ಧಿನಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎನ್.ರಘುರಾಮ ಮಧ್ಯಸ್ಥ, ಆರೂರು ತಿಮ್ಮಪ್ಪ ಶೆಟ್ಟಿ, ಪಿ.ಎಂ.ಜಿ.ಎಸ್.ವೈ ಸಹಾಯಕ ಎಂಜಿನಿಯರ್ ತ್ರಿನೇಶ್, ಆರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಮಮತಾ ಶೆಟ್ಟಿ, ನೀಲಾವರ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಮೇಶ್ ಪೂಜಾರಿ, ಉಮೇಶ್ ಶೆಟ್ಟಿ, ಜ್ಯೋತಿ ವಿ. ಶೆಟ್ಟಿ, ಶಿಲ್ಪಾ ಹರೀಶ್ ರಾವ್, ಸುಮಾ ದೇವಾಡಿಗ, ಪ್ರಿಯಾ ಎಚ್, ಸಂತೋಷ್ ಎಳ್ಳಂಪಳ್ಳಿ, ಪಿಡಿಒ ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT