ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವುದು ತಪ್ಪಲ್ಲ: ಶಾಸಕ ರಘುಪತಿ ಭಟ್

ಉಡುಪಿ: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವುದು ತಪ್ಪಲ್ಲ. ಆದರೆ, ಮೊಟ್ಟೆಯನ್ನು ಕೊಡುವಾಗ ಪ್ರತ್ಯೇಕ ಕೋಣೆ ಅಥವಾ ಟೇಬಲ್‌ನಲ್ಲಿ ಕೊಡುವುದು ಸೂಕ್ತ ಎಂದು ಶಾಸಕ ರಘುಪತಿ ಭಟ್ ಅಭಿಪ್ರಾಯಪಟ್ಟರು.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸಸ್ಯಹಾರ ಪಾಲಿಸಿಕೊಂಡು ಬಂದವರಿಗೆ ಮಾಂಸಾಹಾರ ನೋಡಿದಾಗ ಮನಸ್ಸಿನಲ್ಲಿ ಕಿರಿಕಿರಿ ಆಗಬಹುದು. ಹಾಗಾಗಿ, ಶಾಲೆಗಳಲ್ಲಿ ಪ್ರತ್ಯೇಕವಾಗಿ ಮೊಟ್ಟೆ ಕೊಟ್ಟರೆ ಉಳಿತು ಎಂದರು.
ಎಲ್ಲ ವಿದ್ಯಾರ್ಥಿಗಳು ಮೊಟ್ಟೆ ತಿನ್ನಲೇಬೇಕು ಎಂಬ ನಿಯಮವಿಲ್ಲ. ಅವರವರ ಆಹಾರ ಕ್ರಮಗಳನ್ನು ಪಾಲಿಸಬಹುದು ಎಂದು ಶಾಸಕರ ರಘುಪತಿ ಭಟ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.