ಉಡುಪಿ: ದಿನದಿಂದ ದಿನಕ್ಕೆ ಉಡುಪಿ ನಗರವು ಬೆಳವಣಿಗೆ ಸಾಧಿಸುತ್ತಿದ್ದರೂ ನಗರದಲ್ಲಿ ನಡೆದಾಡುವ ಜನರು ಮಾತ್ರ ದಾರಿ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಇದೆ.

ಪಾದಚಾರಿ ಮಾರ್ಗ ಇಲ್ಲಿ ಬರೀ ಹೆಸರಿಗೆ ಸೀಮಿತವಾಗಿದೆ. ಕೆಲವೆಡೆ ತರಕಾರಿ, ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡರೆ, ಇನ್ನು ಕೆಲವೆಡೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಶೇಖರಣೆ ಜಾಗವಾಗಿ ಮಾರ್ಪಟ್ಟಿದೆ.

ನಗರದಲ್ಲಿ ಪಾರ್ಕಿಂಗ್ಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಜನರು ಕಾರು, ದ್ವಿಚಕ್ರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಅದರಲ್ಲೂ ಪ್ರಮುಖ ರಸ್ತೆ ಬದಿಯೇ ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದೆ. ಈ ನಡುವೆ ಪಾದಚಾರಿ ಮಾರ್ಗವೂ ಇಲ್ಲದೆ ಜನರು ನಡು ರಸ್ತೆಯಲ್ಲೇ ನಡೆದಾಡುವ ಪರಿಸ್ಥಿತಿ ಇದೆ.

ಕಲ್ಸಂಕದಿಂದ ಬನ್ನಂಜೆ ವರೆಗಿನ ರಸ್ತೆ ಬದಿಯಲ್ಲಿ ಸಂಜೆಯಾದರೆ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗದಲ್ಲೇ ವ್ಯಾಪಾರ ನಡೆಸುತ್ತಾರೆ. ಬೀದಿ ಬದಿ ವ್ಯಾಪಾರಿಗಳಿಗೆ ನಗರ ಸಭೆಯು ಜಾಗ ನಿಗದಿಪಡಿಸದ ಕಾರಣ ಸಮಸ್ಯೆ ಬಿಗಡಾಯಿಸಿದೆ ಎಂಬುದು ಜನರ ಆರೋಪ.

ಹಿರಿಯ ನಾಗರಿಕರು, ಅಂಗವಿಕಲರು ಸಮರ್ಪಕ ಪಾದಚಾರಿ ಮಾರ್ಗವಿಲ್ಲದೆ ಬಸವಳಿಯುತ್ತಿದ್ದಾರೆ. ಸಿಟಿಬಸ್ ನಿಲ್ದಾಣದಿಂದ ಕಲ್ಸಂಕ ವರೆಗಿನ ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುವಾಗ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ನಡೆಯಬೇಕಾಗಿದೆ.

ನಗರದ ಅಲಂಕಾರ್ ಥಿಯೇಟರ್ನ ಮುಂಭಾಗದ ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಅಲ್ಲಲ್ಲಿ ಮರಳನ್ನು ಶೇಖರಿಸಿಡಲಾಗಿದೆ. ಇದರಿಂದ ಈ ಮಾರ್ಗದಲ್ಲಿ ನಡೆಯಲು ಪ್ರಯಾಸಪಡಬೇಕಾಗಿದೆ.

ಕಿನ್ನಿಮುಲ್ಕಿಯಿಂದ ಕರಾವಳಿ ಬೈಪಾಸ್ ವರೆಗಿನ ಸರ್ವಿಸ್ ರಸ್ತೆ ಬದಿಯಲ್ಲಿರುವ ಪಾದಚಾರಿ ಮಾರ್ಗ ಅವೈಜ್ಞಾನಿಕವಾಗಿದ್ದು ನಡೆದಾಡಲಾಗದ ಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯರು.

ಇನ್ನು ಕೆಲವೆಡೆ ಪಾದಚಾರಿ ಮಾರ್ಗದಲ್ಲಿ ನಡುನಡುವೆ ಸ್ಲ್ಯಾಬ್ಗಳು ಕುಸಿದ ಪರಿಣಾಮ ಚರಂಡಿ ಬಾಯ್ದೆರೆದು ಅಪಾಯ ಆಹ್ವಾನಿಸುತ್ತಿದೆ. ಕೆಲವೆಡೆ ಪಾದಚಾರಿ ಮಾರ್ಗವೇ ವಾಹನಗಳ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ.

ನಗರದ ಕಲ್ಪನ ಚಿತ್ರಮಂದಿರ ಬಳಿ ಪಾದಚಾರಿ ಮಾರ್ಗವನ್ನು ತರಕಾರಿ ಮಾರಾಟಗಾರರು ಪೂರ್ಣವಾಗಿ ಅತಿಕ್ರಮಿಸಿಕೊಂಡಿದ್ದಾರೆ. ಅಲ್ಲಿ ಜನರು ರಸ್ತೆಯಲ್ಲೆ ನಡೆದಾಡಬೇಕಾಗಿದೆ. ಇದೇ ರೀತಿ ಗುಂಡಿಬೈಲ್ ರಸ್ತೆ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಹಣ್ಣು, ತರಕಾರಿ ವ್ಯಾಪಾರಿಗಳು ಜನರು ನಡೆದಾಡುವ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಎನ್ನುತ್ತಾರೆ ನಾಗರಿಕರು.

ಬೀದಿಬದಿ ವ್ಯಾಪಾರಿಗಳಿಗೆ ನಗರಸಭೆಯು ವಿವಿಧೆಡೆ ಪ್ರತ್ಯೇಕ ಹಬ್ಗಳನ್ನು ನಿರ್ಮಿಸಿದರೆ ಸಮಸ್ಯೆ ಅಲ್ಪಮಟ್ಟಿಗಾದರೂ ಪರಿಹಾರವಾಗಬಹುದೆಂಬುದು ಜನರ ಅಭಿಪ್ರಾಯವಾಗಿದೆ. ನಿಯಮ ಮೀರುವವರಿಗೆ ನಗರಸಭೆಯು ದಂಡ ಹಾಕಬೇಕು ಎಂದೂ ಆಗ್ರಹಿಸುತ್ತಾರೆ ಜನರು.

ಸಿಟಿ ಬಸ್ಸ್ಟ್ಯಾಂಡ್ನಿಂದ ಮಸೀದಿ ರಸ್ತೆವರೆಗೆ, ಕೃಷ್ಣಮಠ ರಸ್ತೆ ಸೇರಿದಂತೆ ವಿವಿಧೆಡೆ ಪಾದಚಾರಿ ಮಾರ್ಗವು ಹೋಟೆಲ್ ಅಂಗಡಿಗಳ ಬೋರ್ಡ್ಗಳನ್ನು ಇರಿಸುವ ಜಾಗವಾಗಿ ಮಾರ್ಪಟ್ಟಿದೆ. ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಬೇಕೆಂಬುದು ಜನರ ಆಗ್ರಹವಾಗಿದೆ.

‘ಕ್ರಮಕ್ಕೆ ಸೂಚನೆ’

ಪಾದಚಾರಿ ಮಾರ್ಗಗಳನ್ನು ಬೀದಿಬದಿ ವ್ಯಾಪಾರಿಗಳು ಹೋಟೆಲ್ ಅಂಗಡಿಯವರು ಅತಿಕ್ರಮಿಸಿರುವ ಬಗ್ಗೆ ದೂರುಗಳು ಬರುತ್ತಿವೆ. ನಾವು ತೆರವುಗೊಳಿಸಿದರೂ ಮತ್ತೆ ಅದೇ ರೀತಿ ಅತಿಕ್ರಮಿಸುತ್ತಿದ್ದಾರೆ. ಈ ಕುರಿತು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಪಾದಚಾರಿ ಮಾರ್ಗದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿ ಸಂಗ್ರಹಿಸುವುದಕ್ಕೂ ಕಡಿವಾಣ ಹಾಕಲು ಸೂಚಿಸಲಾಗುವುದು ಎಂದು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.

‘ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ’

ನಗರಸಭೆಯಲ್ಲಿ ಆಡಳಿತ ನಡೆಸುವವರಿಗೆ ಅಧಿಕಾರಿಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಗೂಡಂಗಡಿ ತಳ್ಳುಗಾಡಿಯವರು ರಸ್ತೆಯಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ. ನಗರಸಭೆ ಕಣ್ಣುಮುಚ್ಚಿ ಕುಳಿತುಕೊಂಡಿದೆ. ನಗರದ ಹೃದಯ ಭಾಗದಲ್ಲಿ ಎಲ್ಲೆಂದರಲ್ಲಿ ರಸ್ತೆ ಅಗೆದು ಹಾಕಿರುವುದರಿಂದ ಕೃತಕ ವಾಹನ ದಟ್ಟಣೆ ನಿರ್ಮಾಣವಾಗುತ್ತಿದೆ. ಪಾದಚಾರಿ ಮಾರ್ಗ ವಿಚಾರವನ್ನು ಮುಂದಿನ ಸಾಮಾನ್ಯ ಸಭೆ ಪೌರಾಯುಕ್ತರಲ್ಲಿ ಪ್ರಸ್ತಾಪಿಸುತ್ತೇನೆ ಎಂದು ನಗರಸಭೆ ವಿರೋಧಪಕ್ಷದ ನಾಯಕ ರಮೇಶ್ ಕಾಂಚನ್ ತಿಳಿಸಿದರು.

‘ಪಾದಚಾರಿ ಮಾರ್ಗಗಳೇ ಇಲ್ಲ’

ಉಡುಪಿ ನಗರದಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ರಸ್ತೆಯಲ್ಲೇ ನಡೆದಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಮರ್ಪಕ ಪಾದಚಾರಿ ಮಾರ್ಗವಿಲ್ಲದ ಕಾರಣ ಜನರು ರಸ್ತೆಯಲ್ಲೇ ನಡೆದಾಡುವಾಗ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇದೆ. ಸಂಬಂಧಪಟ್ಟವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ನಿವೃತ್ತ ನಿರ್ದೇಶಕ ಎಂ.ಆರ್.ಹೆಗ್ಡೆ ತಿಳಿಸಿದರು.

‘ಹಿರಿಯ ನಾಗರಿಕರಿಗೆ ತೊಂದರೆ’

ನಗರದಲ್ಲಿ ಪಾದಚಾರಿ ಮಾರ್ಗವಿಲ್ಲದೆ ಹಿರಿಯ ನಾಗರಿಕರು ಮಹಿಳೆಯರು ಅಂಗವಿಕಲರಿಗೆ ಸಮಸ್ಯೆಯಾಗುತ್ತಿದೆ. ಕೆಲವೆಡೆ ಪಾದಚಾರಿ ಮಾರ್ಗವಿದ್ದರೂ ಅದರ ನಿರ್ವಹಣೆ ಇಲ್ಲದೆ ಸಮಸ್ಯೆ ಸೃಷ್ಟಿಯಾಗಿದೆ. ಕೆಲವೆಡೆ ಪಾದಚಾರಿ ಮಾರ್ಗಕ್ಕೆ ಇಂಟರ್ಲಾಕ್ ಹಾಕಲಾಗಿದೆ. ಆದರೆ ಅದು ಸಮತಟ್ಟಾಗಿಲ್ಲದ ಕಾರಣ ವಯಸ್ಸಾದವರಿಗೆ ನಡೆದಾಡಲು ಕಷ್ಟವಾಗುತ್ತಿದೆ. ನಗರದಲ್ಲಿನ ಇಂತಹ ಅವ್ಯವಸ್ಥೆಯಿಂದಾಗಿ ಹಿರಿಯ ನಾಗರಿಕ ಸುಗಮ ನಡಿಗೆಗೆ ತೊಂದರೆಯಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಪರವಾನಗಿ ನೀಡುವಾಗಲೇ ಕೆಲವು ಷರತ್ತು ವಿಧಿಸಬೇಕು ಎಂದು ವಿಕಲಚೇತನರ ಮತ್ತು ಹಿರಿಯನಾಗರಿಕ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.