ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಯಲ್ಲಿ ಮೇಲು, ಕೀಳು ಭಾವನೆ ಸಲ್ಲದು -ಡಾ.ಮಹಾಬಲೇಶ್ವರ ರಾವ್

ಕನ್ನಡ ಮಾತನಾಡು ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್
Last Updated 29 ಜನವರಿ 2023, 14:29 IST
ಅಕ್ಷರ ಗಾತ್ರ

ಉಡುಪಿ: ಭಾಷೆಯಲ್ಲಿ ಮೇಲು, ಕೀಳು ಎಂಬ ಭಾವನೆ ತೋರದೆ ನೆರೆ ಹೊರೆಯ ಭಾಷೆಗಳನ್ನು ಕಲಿಯಬೇಕು. ಭಾಷೆಗಳ ನಡುವೆ ಬಾಂಧವ್ಯ ಬೆಳೆಯಬೇಕು ಎಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲ್ಲೂಕು ಘಟಕ ಹಾಗೂ ಕೇರಳ ಕಲ್ಚರಲ್ ಅಂಡ್‌ ಸೋಶಿಯಲ್ ಸೆಂಟರ್ ಆಶ್ರಯದಲ್ಲಿ ಮಣಿಪಾಲದ ಸೋನಿಯಾ ಕ್ಲಿನಿಕ್ ಸಭಾಂಗಣದಲ್ಲಿ ನಡೆದ ‘ಕನ್ನಡ ಮಾತನಾಡು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೆರೆ ಹೊರೆಯವರಿಂದ ಭಾಷೆ ಕೊಡುಕೊಳ್ಳುವಿಕೆಯಾಗಬೇಕು. ಇದರಿಂದ ಭಾಷೆ ಬೆಳೆಯುತ್ತದೆ. ಭಾಷಾ ಜ್ಞಾನ ವಿಸ್ತಾರವಾಗಯತ್ತದೆ. ದುರದೃಷ್ಟವಶಾತ್ ಈ ಪ್ರಕ್ರಿಯೆ ಹಿಂದಿನಿಂದ ನಡೆದು ಕೊಂಡು ಬಂದಿಲ್ಲ ಎಂದರು.

ಭಾಷೆಗಳ ಜತೆಗೆ ನೆಲದ ಸಂಸ್ಕೃತಿ ಬಗ್ಗೆಯೂ ಅರಿಯಬೇಕು. ಭಾಷೆ ಒಂದು ಅಂಶವಾಗಿದ್ದು ಸಂಸ್ಕೃತಿ ಅದರ ಮೂಲವಾಗಿದೆ. ವ್ಯಾಕರಣದ ಮೂಲಕ ಭಾಷೆಯನ್ನು ಕಲಿಸುವ ಬದಲು ಸಂವಹನ ಮತ್ತು ಸನ್ನಿವೇಶಗಳ ಆಧಾರಿತವಾಗಿ ಭಾಷೆಯನ್ನು ಕಲಿಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು.

ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ತಾಲ್ಲೂಕು ಘಟಕದಿಂದ ನಡೆಯುತ್ತಿರುವ ಕನ್ನಡ ಮಾತನಾಡು ಕಾರ್ಯಕ್ರಮ ಭಾಷೆಯ ಬೆಳವಣಿಗೆಗೆ ಪೂರಕವಾಗಿದ್ದು ಅರ್ಥಪೂರ್ಣವಾಗಿದೆ ಎಂದರು.

ಸಾಹಿತಿ ಡಾ.ಗಣನಾಥ ಎಕ್ಕಾರು ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಕೇರಳ ಕಲ್ಚರಲ್ ಸೋಶಿಯಲ್ ಸೆಂಟರ್ ಕಾರ್ಯದರ್ಶಿ ಬಿನೇಶ್, ಸದಸ್ಯರಾದ ಮೋಹನ್ ರಾವ್, ಥಾಮಸ್ ಇದ್ದರು.

ಉಡುಪಿ ಕಸಾಪ ಅಧ್ಯಕ್ಷ ಎಚ್‌.ಪಿ.ರವಿರಾಜ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ವಂದಿಸಿದರು. ರಾಜೇಶ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT