ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ದಂಧೆಗೆ ಸಿ.ಎಂ ತಮ್ಮ ಪುತ್ರನನ್ನೇ ಬಿಟ್ಟಿದ್ದಾರೆ: ಕುಮಾರಸ್ವಾಮಿ ಆರೋಪ

ಮಾಜಿ ಮುಖ್ಯಮಂತ್ರಿ
Last Updated 19 ಆಗಸ್ಟ್ 2019, 2:16 IST
ಅಕ್ಷರ ಗಾತ್ರ

ಉಡುಪಿ: ‘ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಪುತ್ರನನ್ನೇ ಇದರ ಹಿಂದೆ ಬಿಟ್ಟಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಭಾನುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ವರ್ಗಾವಣೆ ದಂಧೆಯ ಕರಾಳತೆ ಸರ್ಕಾರಿ ಅಧಿಕಾರಿಗಳಿಗೆ ತಿಳಿದಿದ್ದು, ಅವರ ಪ್ರಾಮಾಣಿಕತನ ಮುಂದಿನ ದಿನಗಳಲ್ಲಿ ಹೊರಬರುತ್ತದೆ’ ಎಂದರು.

‘ಮೈತ್ರಿ ಸರ್ಕಾರವನ್ನು ಲೂಟಿ ಸರ್ಕಾರ, ವರ್ಗಾವಣೆ ದಂಧೆಯ ಸರ್ಕಾರವೆಂದು ಆರೋಪ ಮಾಡುತ್ತಿದ್ದ ಯಡಿಯೂರಪ್ಪ, ಈಗ ಜೈಲಿಗೆ ಹೋಗಿಬಂದಿದ್ದ ತಹಶೀಲ್ದಾರ್‌ನನ್ನು ಯಲಹಂಕಕ್ಕೆ ನೇಮಕ ಮಾಡಲು ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ತಿಳಿಸಲಿ. ನಾನು ಅಧಿಕಾರದಲ್ಲಿದ್ದಾಗ ಆತ ಬೇರೆ ಬೇರೆ ಮೂಲದಿಂದ ಸಾಕಷ್ಟು ಆಫರ್‌ ತಂದಿದ್ದ. ಆಗ ನಾನು ಅದನ್ನು ತಡೆಹಿಡಿದಿದ್ದೆ’ ಎಂದು ತಿಳಿಸಿದರು.

‘ಫೋನ್‌ ಕದ್ದಾಲಿಕೆ ಪ್ರಕರಣ ಕುಮಾರಸ್ವಾಮಿಯನ್ನು ಹತ್ತಿಕ್ಕಲು ಅಸ್ತ್ರವೆಂದು ಒಂದು ವರ್ಗದ ಮಾಧ್ಯಮಗಳು ಬಿಂಬಿಸುತ್ತಿವೆ. ಆದರೆ, ಇದರಲ್ಲಿ ಯಾವ ಅಸ್ತ್ರವೂ ಇಲ್ಲ, ಎಲ್ಲಾ ಅಸ್ತ್ರವೂ ನಿಶ್ಯಸ್ತ್ರ ಆಗುತ್ತವೆ. ಎಷ್ಟೇ ಪ್ರಯತ್ನ ಮಾಡಿದರೂ ನಿಮಗೆ ಯಾವುದೇ ಫಲ ಸಿಗಲ್ಲ. ನನ್ನ ವರ್ಚಸ್ಸನ್ನು ತಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಸವಾಲೆಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT