ಶುಕ್ರವಾರ, ಜೂನ್ 25, 2021
29 °C

ಉಡುಪಿ: ಬೋಟ್‌ ಪಲ್ಟಿ| ಓರ್ವ ಸಾವು- ಇಬ್ಬರ ರಕ್ಷಣೆ, ಐವರು ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಂಗಳೂರಿನ ಎಂಆರ್‌ಪಿಎಲ್‌ ಕಂಪನಿಯ ನಿರ್ವಹಣೆಗೆ ಸಂಬಂಧಪಟ್ಟ ಸಣ್ಣ ಬೋಟ್‌ ಶನಿವಾರ ಅಲೆಗಳ ಹೊಡೆತಕ್ಕೆ ಸಿಕ್ಕು ಮಗುಚಿದೆ. ಅವಘಡದಲ್ಲಿ ಓರ್ವ ಮೃತ‍ಪಟ್ಟಿದ್ದು ಕಾಪು ಬಳಿಯ ಸಮುದ್ರದಲ್ಲಿ ಶವ ಪತ್ತೆಯಾಗಿದೆ.

ಟ್ಯೂಬ್ ಸಹಾಯದಿಂದ ಸಮುದ್ರದಲ್ಲಿ ತೇಲುತ್ತಿದ್ದ ಇಬ್ಬರನ್ನು ಮಟ್ಟು ಶಿರ್ವದ ಮಟ್ಟು ಸಮೀಪ ಮೀನುಗಾರರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊಲ್ಕತ್ತ ಮೂಲದ ಮುನಿರುಲ್ ಮುಲ್ಲಾ ಮತ್ತು ಕರಿಮುಲ್ ಶೇಖ್ ಬದುಕುಳಿದವರು. ಬೋಟ್‌ನಲ್ಲಿ 8 ಮಂದಿ ಇದ್ದರು. ಐವರು ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಮುಂದುವರಿದಿದೆ ಎಂದು ಕರಾವಳಿ ಕಾವಲುಪಡೆಯ ಎಸ್‌ಪಿ ಚೇತನ್ ಮಾಹಿತಿ ನೀಡಿದರು.

ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ದಡಕ್ಕೆ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ.

ಇದನ್ನೂ ನೋಡಿ: ಉಡುಪಿಯಲ್ಲಿ ‘ತೌಕ್ತೆ’ ಅಬ್ಬರಕ್ಕೆ ನೂರಾರು ಮರಗಳು ನೀರುಪಾಲು, ಲೈಟ್‌ ಹೌಸ್ ಬಂಡೆಗೆ ಬಡಿಯುತ್ತಿರುವ ಅಲೆಗಳು
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು