ಸೋಮವಾರ, ಆಗಸ್ಟ್ 8, 2022
23 °C

ಕೆವೈಸಿ ಲಿಂಕ್ ಮಾಡುವುದಾಗಿ ಹೇಳಿ ₹1,05,681 ಆನ್‌ಲೈನ್ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಬ್ಯಾಂಕ್ ಖಾತೆಗೆ ಕೆವೈಸಿ ಲಿಂಕ್ ಮಾಡುವುದಾಗಿ ಆಧಾರ್, ಪಾನ್ ಕಾರ್ಡ್‌ ವಿವರ ಹಾಗೂ ಮೊಬೈಲ್‌ಗೆ ಬಂದ ಒಟಿಪಿ ಮಾಹಿತಿ ವ್ಯಕ್ತಿಯೊಬ್ಬರಿಗೆ ₹ 1,05,681 ವಂಚನೆ ಎಸಗಲಾಗಿದೆ. ಗಣಪತಿ ಕಾಮತ್‌ ಆನ್‌ಲೈನ್ ವಂಚನೆಗೊಳಗಾದವರು. 

ಜುಲೈ 28ರಂದು ಕೆವೈಸಿ ಅಪ್‌ಡೇಟ್ ಆಗದ ಕಾರಣ ಬ್ಯಾಂಕ್‌ ಖಾತೆ ಬ್ಲಾಕ್ ಮಾಡಲಾಗಿದೆ. 24 ಗಂಟೆಯೊಳಗೆ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿ ಎಂಬ ಸಂದೇಶ ಗಣಪತಿ ಕಾಮತ್ ಅವರ ಮೊಬೈಲ್‌ಗೆ ಬಂದಿದೆ.

ಬಳಿಕ ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಆಧಾರ್, ಪಾನ್ ಕಾರ್ಡ್‌, ಒಟಿಪಿ ಪಡೆದು ಕೆನರಾ ಬ್ಯಾಂಕ್‌ನ ಖಾತೆಯಿಂದ  ಕ್ರಮವಾಗಿ ₹ 50,000, ₹ 20,756, ₹ 15,176, ₹ 14,750, ₹ 4,999 ಸೇರಿ ₹ 1,05,681 ಹಣ ವಂಚಿಸಲಾಗಿದೆ.

ಉಡುಪಿ ಸೆನ್‌ ಠಾಣೆಯಲ್ಲಿ ಐ.ಟಿ. ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವನೆ: ಆರೋಪಿ ವಶ

ಉಡುಪಿ: ತಾಲ್ಲೂಕಿನ 76 ಬಡಗಬೆಟ್ಟು ಗ್ರಾಮದ ನಂದಗೋಕುಲ ಯುವಕ ಮಂಡಲ ಬಳಿ ಮಾದಕ ವಸ್ತು ಸೇವಿಸಿದ್ದ ಮೊಹಮ್ಮದ್ ಫಯಾಜ್ ಎಂಬಾತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಆರೋಪಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ಮಣಿಪಾಲದ ಕೆಎಂಸಿ ಫೊರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದ್ದು ಸೆನ್‌ ಅಪರಾಧ ಠಾಣೆಯಲ್ಲಿ ಎನ್‌.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಸೇವನೆ

ಉಡುಪಿ: 76 ನೇ ಬಡಗುಬೆಟ್ಟು ಗ್ರಾಮದ ಹನುಮಾನ್ ಗ್ಯಾರೇಜ್ ಬಳಿ ಮಾದಕ ವಸ್ತು ಸೇವಿಸಿದ್ದ ವೆಲಿಂಗ್ಟನ್ ರಿಚರ್ಡ್‌ (39) ಎಂಬಾತನನ್ನು ವಶಕ್ಕೆ ಪಡೆದ  ಪೊಲೀಸರು ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯನ್ನು ಕೆಎಂಸಿ ಫೊರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು