ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೊಳ್ಳಿಗೆ ಮರಳಿದ ಪಾದಯಾತ್ರಿ ತಂಡ

Last Updated 25 ಜೂನ್ 2018, 11:46 IST
ಅಕ್ಷರ ಗಾತ್ರ

ಬೈಂದೂರು : ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವರ ಸನ್ನಿಧಿಯಿಂದ ಶ್ರೀ ಕ್ಷೇತ್ರ ಪಂಡರಾಪುರದ ಶ್ರೀ ವಿಠಲನ ಸನ್ನಿಧಿಗೆ ಇದೇ 8ರಂದು ಪಾದಯಾತ್ರೆ ಕೈಗೊಂಡಿದ್ದ ಗೌಡ ಸಾರಸ್ವತ ಸಮಾಜದ 13 ಮಂದಿ ಸೋಮವಾರ ಗಂಗೊಳ್ಳಿಗೆ ಮರಳಿ ಬಂದಿದರು.

ಸುಮಾರು 580 ಕಿ.ಮೀ. ದೂರವನ್ನು ಕ್ರಮಿಸಿದ ಪಾದಯಾತ್ರಿಗಳು ಶನಿವಾರ ಪಂಡರಾಪುರ ತಲುಪಿದ್ದರು. ಅಲ್ಲಿನ ಚಂದ್ರಬಾಗಾ ನದಿಯಲ್ಲಿ ಸ್ನಾನ ಮಾಡಿ ಶ್ರೀದೇವರ ದರ್ಶನ ಪಡೆದ ಬಳಿಕ ದೇವಸ್ಥಾನದಲ್ಲಿ ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ಜರಗಿದ ಭಜನೆಯಲ್ಲಿ ಪಾಲ್ಗೊಂಡರು. ಶ್ರೀದೇವರ ಪ್ರಸಾದ ಸ್ವೀಕರಿಸಿ ಮರುಯಾತ್ರೆ ಕೈಗೊಂಡರು.

ಗಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಿ. ಗಣೇಶ ಶೆಣೈ ಮತ್ತು ಕೃಷ್ಣ ಪಡಿಯಾರ್ ನೇತೃತ್ವದ ಯಾತ್ರಿಗಳ ತಂಡದಲ್ಲಿ ನವೀನ ಭಟ್ ಹಟ್ಟಿಯಂಗಡಿ, ಗಣೇಶ ಕಿಣಿ, ವಿಜೇಶ ಪಡಿಯಾರ್, ಕೆ.ಹರೀಶ ನಾಯಕ್, ಜಿ. ವಿಜೇಂದ್ರ ನಾಯಕ್, ಜಿ. ವಿಷ್ಣುದಾಸ ಭಟ್, ಶ್ರೀಧರ ಪ್ರಭು ಕುಂದಾಪುರ, ಜಿ. ಪ್ರಶಾಂತ ನಾಯಕ್ ಗುಜ್ಜಾಡಿ, ಸತೀಶ ಕಾಮತ್ ಕೋಟೇಶ್ವರ, ನಿತ್ಯಾನಂದ ಪೈ ಸಾಸ್ತಾನ, ಪ್ರಕಾಶ ಪ್ರಭು, ವಾಹನ ಚಾಲಕ ಮಧು ಗಂಗೊಳ್ಳಿ ಪಾದಯಾತ್ರೆ ನಡೆಸಿದ್ದರು.

ದಾರಿಯುದ್ದಕ್ಕೂ ಪಾದಯಾತ್ರಿಗಳಿಗೆ ಸ್ವಾಗತ ಕೋರಿದ ಆಯಾ ಗ್ರಾಮದ ಗ್ರಾಮಸ್ಥರು ಅವರಿಗೆ ಆತಿಥ್ಯ ನೀಡಿ ಸಹಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT