ಮಂಗಳವಾರ, ಜೂನ್ 28, 2022
21 °C

ಕಾರ್ಕಳ: ಅಗತ್ಯವಸ್ತು ಖರೀದಿಗೆ ಮುಗಿಬಿದ್ದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ಇಲ್ಲಿನ ಪೇಟೆಯಲ್ಲಿ ಅಗತ್ಯ ವಸ್ತು ಖರೀದಿಗಾಗಿ ಸೋಮವಾರ ಬೇರೆ ಬೇರೆ ಕಡೆಗಳಿಂದ ಬಂದ ವಾಹನ ಹಾಗೂ ಜನಸಂದಣಿಯಿಂದ ಸಂಚಾರ ದಟ್ಟಣೆ ಉಂಟಾಯಿತು.

ಈಗಾಗಲೇ ತಾಲ್ಲೂಕಿನ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದ್ದು, ಈ ಪ್ರದೇಶದ ಜನರಿಗೆ ಸೋಮವಾರ ಮತ್ತು ಮಂಗಳವಾರ ಮಾತ್ರ ಬೆಳಿಗ್ಗೆ 6ರಿಂದ 10ರ ತನಕ ಅಗತ್ಯವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.  ಗ್ರಾಮೀಣ ಜನರು ಪೇಟೆಗೆ ಬಂದ ಕಾರಣ ಪೇಟೆ ಜನಸಂದಣಿಯಿಂದ ತುಂಬಿತ್ತು. ಎಲ್ಲೆಂದರಲ್ಲಿ ಜನರು, ವಾಹನಗಳು ತುಂಬಿ, ರಸ್ತೆ ದಾಟಿ ಇನ್ನೊಂದು ಕಡೆ ಖರೀದಿಗೆ ಹೋಗಲೂ ಕಾಯಬೇಕಾದ ಪರಿಸ್ಥಿತಿ ಕಂಡುಬಂತು.

ಔಷಧ ಅಂಗಡಿ, ಬ್ಯಾಂಕ್, ದಿನಸಿ ಅಂಗಡಿಗಳ ಎದುರು ಜನ ಉದ್ದದ ಸರದಿ ಸಾಲಿನಲ್ಲಿ ನಿಂತಿದ್ದರು. ಮುಖ್ಯ ಮಾರ್ಗದಲ್ಲಿ ಸಂಚಾರ ದಟ್ಟಣೆಯಿಂದ ಜನರಿಗೆ ಕೊಂಚ ತೊಂದರೆ ಉಂಟಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು