ಭಾನುವಾರ, ಜೂನ್ 26, 2022
25 °C

‘ಪಾಲಿಸಿ ನವೀಕರಣಕ್ಕೆ ಬ್ಯಾಂಕ್ ಖಾತೆಯಲ್ಲಿ ಹಣ ಇರಲಿ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಪ್ರಧಾನಮಂತ್ರಿ ಜೀವನ್‌ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ) ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ(ಪಿಎಂಎಸ್‌ಬಿವೈ)ಯಡಿ ನೋಂದಾಯಿಸಿಕೊಂಡಿರುವವರು ವಿಮಾ ಪಾಲಿಸಿಗಳ ನವೀಕರಣಕ್ಕೆ ಅಗತ್ಯವಿರುವಷ್ಟು ಹಣವನ್ನು ಬ್ಯಾಂಕ್‌ ಖಾತೆಯಲ್ಲಿ ಉಳಿಸಿರಬೇಕು ಎಂದು ಲೀಡ್ ಬ್ಯಾಂಕ್‌ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ.

ಪಿಎಂಜೆಜೆಬಿವೈ ಹಾಗೂ ಪಿಎಂಎಸ್‌ಬಿವೈ ಪಾಲಿಸಿಗಳ 2022–23ನೇ ಸಾಲಿನ ನವೀಕರಣಕ್ಕೆ ಮೇ 31 ಅಂತಿಮದಿನವಾಗಿದ್ದು, ಈ ದಿನಾಂಕದೊಳಗೆ ಖಾತೆಯಲ್ಲಿ ಅಗತ್ಯವಿರುವಷ್ಟು ಹಣ ಇರುವಂತೆ ಖಾತೆದಾರರು ಎಚ್ಚರವಹಿಸಬೇಕು. ಖಾತೆಯಲ್ಲಿ ಹಣ ಇಲ್ಲದಿದ್ದರೆ ಪಾಲಿಸಿ ರದ್ದಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಿಎಂಜೆಜೆಬಿವೈ ಪಾಲಿಸಿದಾರರ ಖಾತೆಯಲ್ಲಿ ₹ 330 ಹಾಗೂ ಪಿಎಂಎಸ್‌ಬಿವೈ ಪಾಲಿಸಿದಾರರ ಖಾತೆಯಲ್ಲಿ ₹ 12 ಇರಬೇಕು. ಮೇ 25ರಿಂದ 30ರವರೆಗೂ ಪಾಲಿಸಿದಾರರ ಖಾತೆಯಿಂದ ಹಣ ಕಡಿತ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.