ಮಂಗಳವಾರ, ಜನವರಿ 26, 2021
15 °C

ಡಿ.12, 14ರಂದು ಜಿಮಿನಿಡ್ ಉಲ್ಕಾವೃಷ್ಟಿ ಗೋಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಡಿ.12 ಹಾಗೂ 14ರಂದು ಜಿಮಿನಿಡ್ ಉಲ್ಕಾವೃಷ್ಟಿ ಗೋಚರಿಸಲಿದ್ದು, ಸೌರವ್ಯೂಹದ ಈ ಕೌತುಕವನ್ನು ಸಾರ್ವಜನಿಕರು ಕಣ್ತುಬಿಕೊಳ್ಳಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.

ಉಲ್ಕಾವೃಷ್ಟಿ ವೀಕ್ಷಣೆಗೆ ಕತ್ತಲಿನ ಪ್ರದೇಶ ಸೂಕ್ತವಾಗಿದ್ದು, ರಾತ್ರಿ 8.30ರಿಂದ ಸೂರ್ಯೋದಯದವರೆಗೆ ಕಾಣಬಹುದು. ರಾತ್ರಿ 1ರಿಂದ ಮುಂಜಾನೆ 4ರವರೆಗೆ ಅವಧಿ ಉಲ್ಕೆಯ ವೀಕ್ಷಣೆಗೆ ವೀಕ್ಷಣೆಗೆ ಸೂಕ್ತವಾಗಿದೆ. ಕಾರಣ ಈ ಅವಧಿಯಲ್ಲಿ ನಕ್ಷತ್ರ ಪುಂಜವು ಕ್ಷಿತಿಜದಿಂದ ಮೇಲೆ ಕಾಣುವುದರಿಂದ ಸ್ಪಷ್ಟವಾಗಿ ಉಲ್ಕೆಗಳನ್ನು ವೀಕ್ಷಿಸಬಹುದು.

ಜೆಮಿನಿಡ್ ಉಲ್ಕಾವೃಷ್ಟಿಯು ‘3200 ಫೆಥನ್’ ಎಂಬ ಕ್ಷುದ್ರಗ್ರಹದಿಂದ ಉಧ್ಭವಿಸುತ್ತದೆ. ಈ ಕ್ಷುದ್ರಗ್ರಹದ ಅವಶೇಷಗಳು ಹೆಚ್ಚಾಗಿರುವುದರಿಂದ ಜೆಮಿನಿಡ್ ಉಲ್ಕಾವೃಷ್ಟಿಯೂ ಕುತೂಹಲಕಾರಿ ವಿದ್ಯಮಾನವಾಗಿದೆ. ಗಂಟೆಗೆ 120ರಷ್ಟು ಉಲ್ಕೆಗಳನ್ನು ವೀಕ್ಷಿಸಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ  ಖಗೋಳ ವೀಕ್ಷಕರ ಸಂಘ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.