ಉಡುಪಿ: ಪೂರ್ಣಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಸಾಗರದ ಹೆಗ್ಗೋಡು ಚರಕ ಮಹಿಳಾ ವಿವಿದ್ದೋದ್ಧೇಶ ಸಹಕಾರ ಸೊಸೈಟಿ ಆಶ್ರಯದಲ್ಲಿ ಖಾದಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಪ್ರದರ್ಶನದಲ್ಲಿ ಚರಕ ಮಹಿಳಾ ವಿವಿದ್ದೋದ್ದೇಶ ಸಹಕಾರ ಸೊಸೈಟಿಯ ವಿನ್ಯಾಸ ಮತ್ತು ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕಿ ಪದ್ಮಶ್ರೀ ಮಾತನಾಡಿ, ಚರಕ ಸಂಸ್ಥೆಯು ಕೈಮಗ್ಗದಿಂದ ಶುದ್ಧ ಹತ್ತಿ ಹಾಗೂ ನೈಸರ್ಗಿಕ ಬಣ್ಣ ಬಳಸಿ ಖಾದಿ ಉತ್ಪನ್ನಗಳನ್ನು ತಯಾರಿಸುತ್ತಿದ್ದು ರಾಜ್ಯದಾದ್ಯಂತ ಪ್ರದರ್ಶನ ಹಾಗೂ ಮಾರಾಟದಲ್ಲಿ ತೊಡಗಿದೆ. ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮೂರು ದಿನ ನಡೆಯುವ ಮೇಳದಲ್ಲಿ ಸಂಸ್ಥೆಯ ಖಾದಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಶರ್ಟ್, ಜುಬ್ಬಾ, ಮಹಿಳೆಯರ ಟಾಪ್, ಸೀರೆ, ಬ್ಯಾಗ್, ಕೌದಿ ಲಭ್ಯವಿದೆ ಎಂದರು.
ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳು, ಉಡುಪಿಯ ಐವರು ಮಹಿಳಾ ಉದ್ಯಮಿಗಳು ತಯಾರಿಸಿರುವ ಆಹಾರ ಪದಾರ್ಥಗಳು, ಗೃಹೋಪಯೋಗಿ ವಸ್ತುಗಳು, ತೆಂಗಿನ ನಾರಿನಿಂದ ತಯಾರಿಸಿ ಪಾಟ್‌ಗಳು, ಗಜೇಂದ್ರಗಡದ ನೇಕಾರರಿಂದ ತಯಾರಾಗಿರುವ ಇಳ್‌ಕಲ್ ಸೀರೆಗಳು, ಬೆಡ್‌ಶೀಟ್‌ಗಳು ಪ್ರದರ್ಶನದಲ್ಲಿ ಮಾರಾಟಕ್ಕೆ ಲಭ್ಯವಿದ್ದು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.