ಕುಂದಾಪುರ: ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ ಹತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಜುಲೈ 9ಕ್ಕೆ ಮುಂದೂಡಲಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ತಿಳಿಸಿದರು.

ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಮಂಗಳವಾರ ಕಟ್ಟಡ ಕಾರ್ಮಿಕರ ಸೆಸ್ ಕಾಯ್ದೆ ರದ್ಧತಿ ಹಾಗೂ ನೂತನ ಕಾರ್ಮಿಕ ಸಂಹಿತೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದೇಶದ ಕಾರ್ಮಿಕ ವರ್ಗ ಕಷ್ಟಪಟ್ಟು ಗಳಿಸಿದ, ಕಾರ್ಮಿಕರ ಪರವಾಗಿದ್ದ ಕಾನೂನನ್ನು ಬಂಡವಾಳಶಾಹಿಗಳ ಪಾದದಡಿ ಇಟ್ಟು, ನವ ಗುಲಾಮಗಿರಿಗೆ ತಳ್ಳುವ ಸಂಹಿತೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ಸಿಐಟಿಯು ತಾಲ್ಲೂಕು ಸಂಚಾಲಕ ಚಂದ್ರಶೇಖರ ವಿ, ಸಂಘದ ಗೌರವ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ವಿಜೇಂದ್ರ ಕೋಣಿ, ಸುಧೀರ್ ಕುಮಾರ್, ಶಶಿಕಾಂತ್ ಎಸ್, ರಾಘವೇಂದ್ರ ಡಿ. ಭಾಗವಹಿಸಿದ್ದರು. ಕೇಂದ್ರದ 4 ಸಂಹಿತೆ ಪ್ರತಿಗಳನ್ನು ದಹಿಸಿದ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಹೆಂಚು ಕಾರ್ಖಾನೆ ಸಂಘಟನೆಯಿಂದ ಸಂಹಿತೆ ದಹನ: ಕೇಂದ್ರ ಸರ್ಕಾರದ ನೂತನ ಸಂಹಿತೆಗಳು ವೇತನ ಪಾವತಿ ಕಾಯ್ದೆ, ಕನಿಷ್ಠ ವೇತನ ಕಾಯ್ದೆ, ಬೋನಸ್ ಪಾವತಿ ಕಾಯಿದೆ, ಸಮಾನ ಸಂಭಾವನೆ ಕಾಯ್ದೆಯನ್ನು 2019ರ ನೂತನ ಸಂಹಿತೆ ರದ್ದುಗೊಳಿಸುತ್ತದೆ. ಟ್ರೇಡ್ ಯೂನಿಯನ್ಸ್ ಕಾಯಿದೆ, ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ ಕಾಯ್ದೆ, ಕೈಗಾರಿಕಾ ವಿವಾದಗಳ ಕಾಯ್ದೆಗಳನ್ನು 2020ರಲ್ಲಿ ತಂದ ನೂತನ ಸಂಹಿತೆ ರದ್ದುಗೊಳಿಸುತ್ತದೆ. ಇದು ಕಾರ್ಮಿಕರಿಗೆ ಕಾನೂನಿನ ರಕ್ಷಣೆ ಇಲ್ಲದಂತೆ ಮಾಡುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಹೆಂಚು ಕಾರ್ಮಿಕರು, ಸಂಘದ ತಾಲ್ಲೂಕು ಕಚೇರಿಯ ಗೇಟ್ ಬಳಿ ಪ್ರತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧೆಡೆ ಪ್ರತಿಭಟನೆ: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ 4 ಸಂಹಿತೆಗಳನ್ನು ವಿರೋಧಿಸಿ ಜಿಲ್ಲಾ ಹೆಂಚು ಕಾರ್ಮಿಕ ಸಂಘದ ಕರೆಯ ಮೇರೆಗೆ ಕುಂದಾಪುರದ ಮಂಗಳೂರು ಟೈಲ್ಸ್, ಪ್ರಭಾಕರ ಟೈಲ್ಸ್, ಸುಪ್ರೀಂ ಟೈಲ್ಸ್, ಮೂಕಾಂಬಿಕಾ ಟೈಲ್ಸ್, ಗ್ರೀನ್ಲ್ಯಾಂಡ್ ಟೈಲ್ಸ್, ಇತರ ಹೆಂಚು ಕಾರ್ಖಾನೆಯಲ್ಲಿ ಬೆಳಿಗ್ಗೆ ಫ್ಯಾಕ್ಟರಿ ಗೇಟ್ ಎದುರು ಕಾರ್ಮಿಕರು ಜಮಾವಣೆಗೊಂಡು ಆದೇಶ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆ, ಸಾರ್ವಜನಿಕ ಆಸ್ತಿಗಳ ಮಾರಾಟ ವಿರೋಧಿಸಿ, ಕಾರ್ಮಿಕರನ್ನು ಗುಲಾಮರನ್ನಾಗಿಸುವ ಶ್ರಮ ಸಂಹಿತೆ ವಿರೋಧಿಸಿ ಆದೇಶ ಪ್ರತಿಗಳನ್ನು ಸುಟ್ಟು, ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು. ಸಂಘದ ಪದಾಧಿಕಾರಿಗಳಾದ ಸುರೇಂದ್ರ, ಲಕ್ಷ್ಮಣ ಡಿ, ಪ್ರಕಾಶ್ ಕೋಣಿ, ಆನಂದ್ ಶೆಟ್ಟಿ, ವಾಸು, ಚಂದ್ರ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.