ಕೋಟ(ಬ್ರಹ್ಮಾವರ): ಇಲ್ಲಿನ ಅಮೃತೇಶ್ವರಿ ದೇವಸ್ಥಾನಕ್ಕೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾನುವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ನೀಡಲಾಯಿತು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಬಾಕಿ ಇದ್ದು, ಇಲಾಖೆಯಿಂದ ಸೂಕ್ತ ಅನುದಾನ ಒದಗಿಸುವಂತೆ ದೇವಸ್ಥಾನದ ವತಿಯಿಂದ ಕೋರಲಾಯಿತು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಆನಂದ ಸಿ ಕುಂದರ್, ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಶಾಂತ್ ಶೆಟ್ಟಿ, ಅರ್ಚಕ ಗಣೇಶ ಜೋಗಿ ಹಾಗೂ ಸಂಗಡಿಗರು, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್, ಸ್ಥಳೀಯ ಮುಖಂಡರಾದ ಚಂದ್ರ ಆಚಾರ್ಯ, ಗಣೇಶ ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ, ದಿನೇಶ ಬಂಗೇರ, ಪಾರಂಪಳ್ಳಿ ರವೀಂದ್ರ ಐತಾಳ, ದೇವದಾಸ ಬಂಗೇರ, ರಾಜೇಶ ನೆಲ್ಲಿಬೆಟ್ಟು, ದೇವೇಂದ್ರ ಗಾಣಿಗ, ರಾಘವೇಂದ್ರ ವೈ.ಬಿ, ರತ್ನಾಕರ ಶ್ರೀಯಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.