ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಕ್ಕೆ ಸ್ಪಂದಿಸುವುದು ಕೂಡ ಆಧ್ಯಾತ್ಮ: ಕೇಮಾರು ಸ್ವಾಮೀಜಿ

ಮಟ್ಟಾರು ಸಾರ್ವಜನಿಕ ಗಣೇಶೋತ್ಸವ ದಶಮಾನೋತ್ಸವದ ಧಾರ್ಮಿಕ ಕಾರ್ಯಕ್ರಮ ಉದ್ಘಾಟನೆ
Last Updated 3 ಸೆಪ್ಟೆಂಬರ್ 2022, 5:12 IST
ಅಕ್ಷರ ಗಾತ್ರ

ಶಿರ್ವ: ಜನರಲ್ಲಿ ಭಕ್ತಿ ಹೆಚ್ಚಾಗಿದ್ದು ಬುದ್ಧಿ ಕಡಿಮೆಯಾಗಿದೆ. ಗುಡಿಗಳನ್ನು ಕಟ್ಟಿ ದೇವರನ್ನು ಪೂಜಿಸುವುದಷ್ಟೇ ಆಧ್ಯಾತ್ಮವಲ್ಲ. ನೊಂದವರ ಕಣ್ಣೀರು ಒರೆಸುವ ಕೆಲಸವೂ ಆಧ್ಯಾತ್ಮ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶಿರ್ವ ಮಟ್ಟಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ದಶಮಾ ನೋತ್ಸವ ಸಮಾರಂಭದ ಧಾರ್ಮಿಕ ಸಭೆ ಕಾರ್ಯಕ್ರಮ ಉದ್ಘಾಟಿಸಿಅವರು ಮಾತನಾಡಿದರು.

ದಶಮಾನೋತ್ಸವ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಮಟ್ಟಾರು ಸಾರ್ವಜನಿಕ ಗಣೇಶೋತ್ಸವ ಊರ ಉತ್ಸವದ ರೀತಿಯಲ್ಲಿ ನಡೆಯುತ್ತಿದೆ ಎಂದರು.

ಶಾಸಕ ಲಾಲಾಜಿ ಆರ್.ಮೆಂಡನ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸುರೇಶ್ ಶೆಟ್ಟಿ ಗುರ್ಮೆ, ಪಡುಬಿದ್ರಿ ಎಎಸ್‍ಪಿಎನ್ ಸಂಸ್ಥೆಯ ಸೀನಿಯರ್ ಜನರಲ್ ಮೆನೇಜರ್ ಅಶೋಕ್ ಕುಮಾರ್ ಶೆಟ್ಟಿ, ಕೋಲಾಪುರ ತುಳು ಕೂಟದ ಅಧ್ಯಕ್ಷ ತ್ಯಾಗರಾಜ್ ಶೆಟ್ಟಿ, ಉಡುಪಿ ಸಿಎ ಅಸೋಸಿಯೇಶನ್ಸ್ ಅಧ್ಯಕ್ಷ ಲೋಕೇಶ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಪುಷ್ಪರಾಜ್ ಶೆಟ್ಟಿ, ಸುರತ್ಕಲ್ ರೆಸಿಡೆನ್ಸ್ ವೆಲ್ಫೇರ್‌ ಟ್ರಸ್ಟ್‌ನ ರಮೇಶ್ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಇದ್ದರು. ಪ್ರಖ್ಯಾತ್ ಶೆಟ್ಟಿ ನಿರೂಪಿಸಿದರು. ಸುರೇಂದ್ರ ಪೂಜಾರಿ ಕೊಪ್ಪಲಮನೆ ವಂದಿಸಿದರು. ಕುದ್ರೋಳಿ ಗಣೇಶ್ ತಂಡದಿಂದ ಮ್ಯಾಜಿಕ್ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT