ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ರಿ: ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ₹73.73 ಲಕ್ಷ ಲಾಭ, ಶೇ 8 ಡಿವಿಡೆಂಟ್

Published : 10 ಸೆಪ್ಟೆಂಬರ್ 2024, 6:42 IST
Last Updated : 10 ಸೆಪ್ಟೆಂಬರ್ 2024, 6:42 IST
ಫಾಲೋ ಮಾಡಿ
Comments

ಹೆಬ್ರಿ: ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ ರೈತರಿಗಾಗಿ ಉತ್ತಮ ಕೆಲಸ ಮಾಡಿ ಜನಮನ್ನಣೆ ಪಡೆದಿದೆ. ಸಂಸ್ಥೆಗೆ ₹73.73 ಲಕ್ಷ ಲಾಭಾಂಶ ಬಂದಿದ್ದು, ಶೇ 8 ಡಿವಿಡೆಂಟ್ ಘೋಷಣೆ ಮಾಡುತ್ತೇವೆ ಎಂದು ಸಂಘದ ಅಧ್ಯಕ್ಷ ಬಿ. ಕರುಣಾಕರ ಶೆಟ್ಟಿ ಹೇಳಿದರು.

ಇಲ್ಲಿನ ಅನಂತಪದ್ಮನಾಭ ದೇವಸ್ಥಾನದಲ್ಲಿ ಈಚೆಗೆ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸ ಕಟ್ಟಡಕ್ಕೆ ಜಾಗ ಖರೀದಿ ಮಾಡಲಾಗಿದೆ. ದುಡಿಯುವ ಬಂಡವಾಳ ಹೆಚ್ಚಿಸಲು ಗಮನ ಹರಿಸಲಾಗುವುದು. ಯಶಸ್ವಿನಿ ಯೋಜನೆಯಡಿ ರೈತರಿಗೆ ಸಹಕಾರ ಆಗುವಂತೆ ಯೋಜನೆ ರೂಪಿಸಿದ್ದೇವೆ. ಸುಸ್ತಿ ಸಾಲಗಳ ಮರುಪಾವತಿ ಹೆಚ್ಚುತ್ತಿದೆ. ಬ್ಯಾಂಕಿಂಗ್, ಇತರ ಸೇವೆ ನೀಡಿ ರೈತರು, ಸದಸ್ಯರಿಗೆ ಉತ್ತಮ ಸೇವೆ ನೀಡಿದ್ದೇವೆ ಎಂದು ತಿಳಿಸಿದರು.

ಕೃಷಿಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು. ಸದಸ್ಯರಾದ ಸೀತಾನದಿ ವಿಜೇಂದ್ರ ಶೆಟ್ಟಿ, ಸಂಜೀವ ಶೆಟ್ಟಿ ಕೆರೆಬೆಟ್ಟು, ರಾಜೀವ ಶೆಟ್ಟಿ, ಶೀನ ಪೂಜಾರಿ, ರಾಜೇಶ್ ಕುಡಿಬೈಲ್, ಪಾಂಡುರಂಗ ಪೂಜಾರಿ, ರಂಗನಾಥ ಪೂಜಾರಿ ಸೂಚನೆ ನೀಡಿದರು. ಸಂಘದ ಉಪಾಧ್ಯಕ್ಷೆ ಸುಮಿತ್ರಾ ಹೆಗ್ಡೆ, ನಿರ್ದೇಶಕರಾದ ಸುಧಾಕರ ಹೆಗ್ಡೆ, ಪುಟ್ಟಣ್ಣ ಭಟ್, ಗಣೇಶ್ ಕುಮಾರ್, ಸುಧಾ ಜಿ. ನಾಯಕ್, ಸುರೇಶ್ ಭಂಡಾರಿ, ಬಸವ ನಾಯ್ಕ, ವಸಂತ ನಾಯ್ಕ, ಸಿಬ್ಬಂದಿ, ಸದಸ್ಯರು ಇದ್ದರು. ಸಿಇಒ ಶೀನ ನಾಯ್ಕ್ ವರದಿ ವಾಚಿಸಿದರು. ನಿರ್ದೇಶಕರಾದ ನವೀನ್ ಕೆ. ಅಡ್ಯಂತಾಯ ಸ್ವಾಗತಿಸಿದರು. ಪುಟ್ಟಣ್ಣ ಭಟ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT