ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ: ‘ಕಲಾವಿದರು ಒಂದೇ ಸೂರಿನಡಿ ಸೇರಲಿ’

Last Updated 6 ಫೆಬ್ರುವರಿ 2023, 6:41 IST
ಅಕ್ಷರ ಗಾತ್ರ

ಕಾರ್ಕಳ: ‘ಕಲಾವಿದರು ಒಂದೇ ಸೂರಿನಡಿ ಸೇರಬೇಕು. ಇದಕ್ಕಾಗಿ ಆರು ವರ್ಷಗಳಿಂದ ಸಪ್ತಸ್ವರ ಕಲಾವಿದರ ಸಂಘ ನಿರಂತರ ಸಂಪರ್ಕ ಬೆಳೆಸಲು ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ’ ಎಂದು ನಾದಸ್ವರ ವಿಶಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ನಾಗೇಶ್ ಎ.ಬಪ್ಪನಾಡು ಹೇಳಿದರು.

ಇಲ್ಲಿನ ವೇಣುಗೋಪಾಲಕೃಷ್ಣ ದೇವಸ್ಥಾನದ ಕೃಷ್ಣ ಸಭಾಭವನದಲ್ಲಿ ಸಪ್ತಸ್ವರ ಸಾಂಪ್ರದಾಯಿಕ ಮತ್ತು ಜಾನಪದ ವಾದ್ಯ ಕಲಾವಿದರ ಸಂಘದ ವತಿಯಿಂದ ಆಯೋಜಿಸಿದ್ದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದ ಸದಸ್ಯರು ಸಂಘದ ಮಹಾಸಭೆಯಲ್ಲಿ ಗೈರು ಹಾಜರಾಗುವುದನ್ನು ತಪ್ಪಿಸಬೇಕು ಎಂದರು. ವಕೀಲ ರವೀಂದ್ರ ಮೊಯಿಲಿ ಮಾತನಾಡಿ, ಕಳೆದ ಬಾರಿ ಕಾರ್ಕಳ ಉತ್ಸವದ ಸಮಯದಲ್ಲಿ ಎಲ್ಲಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ಕಲಾವಿದರನ್ನು ಅಭಿನಂದಿಸಲಾ
ಯಿತು. ಸಂಘದ ಗೌರವಾಧ್ಯಕ್ಷ ಸುಂದರ ಸಪಲಿಗ, ಅಧ್ಯಕ್ಷ ಶಿವರಾಮ ದೇವಾಡಿಗ, ಕೋಶಾಧಿಕಾರಿ ಪಾಂಡು ದೇವಾಡಿಗ, ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT