ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪುಂದದಲ್ಲಿ ಸೀತಾರಾಮ ಕಲ್ಯಾಣೋತ್ಸವ

Last Updated 1 ಏಪ್ರಿಲ್ 2023, 14:46 IST
ಅಕ್ಷರ ಗಾತ್ರ

ಬೈಂದೂರು: ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಎನ್.ಸತೀಶ್ ಪೈ ಹಾಗೂ ಯು.ಮೋಹನ್ ಪೈ ಸೇವಾರ್ಥ ಪ್ರಥಮ ಬಾರಿಗೆ ಸೀತಾ ರಾಮ ಕಲ್ಯಾಣೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪರ್ಯಾಯ ಅರ್ಚಕ ವೃಂದದ ಉಸ್ತುವಾರಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಕೋಟಿ ರಾಮನಾಮ ತಾರಕ ಮಂತ್ರ ಜಪ ಯಜ್ಞದ ಪ್ರಯುಕ್ತ ಆರು ದಿನಗಳ ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದು ಮೂರನೇ ದಿನ ಕಲ್ಯಾಣೋತ್ಸವ ನಡೆಯಿತು.

ವರನ ಕಡೆಯವರನ್ನು ಬರಮಾಡಿಕೊಂಡು ಸ್ವಾಗತ ನೀಡಿ ವರಪೂಜೆ, ಸೀಮಾಂತ್ಯ ಪೂಜೆ, ಉದ್ದಿನ ಮೂಹೂರ್ತ ಮಾಲಾಧಾರಣೆ, ಮಾಂಗಲ್ಯ ಧಾರಣೆ, ಕನ್ಯಾದಾನ, ಮುಂತಾದ ವಿಧಿವಿಧಾನಗಳು ನಡೆದವು. ವೇದಮೂರ್ತಿ ಚಂದ್ರಶೇಖರ್ ಭಟ್ ನೇತೃತ್ವ ವಹಿಸಿದ್ದರು.

ವಧು ವರರ ಕಡೆಯಿಂದ ಯಜಮಾನರಾಗಿ ಸೇವಾದಾರರು ಹಾಗೂ ಕುಟುಂಬದ ಸದಸ್ಯರು, ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷ ರಾಜೇಶ್ ಪೈ ಉಪಸ್ಥಿತರಿದ್ದರು.

ವೈದಿಕರಾದ ವಿನಾಯಕ ಭಟ್ ಸೀತಾ ರಾಮ ಕಲ್ಯಾಣೋತ್ಸವದ ಮಹತ್ವ ವಿವರಿಸಿದರು. ಜತೆ ಕಾರ್ಯದರ್ಶಿ ಪಾಂಡುರಂಗ ಪಡಿಯಾರ್ ದೇವಸ್ಥಾನದ ಮುಂದಿನ ಕಾರ್ಯಯೋಜನೆಯ ಕುರಿತು ಮಾಹಿತಿ ನೀಡಿದರು. ಕೋಶಾಧ್ಯಕ್ಷ ಮಂಜುನಾಥ ಮಹಾಲೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT