ಉಡುಪಿ: ಬ್ರಹ್ಮಾವರ ತಾಲ್ಲೂಕು ಹೊಸೂರು ಗ್ರಾಮದ ಉದ್ದಳ್ಕದ ನವೀನ್ ನಾಯ್ಕ ಅಲಿಯಾಸ್ ಗುಂಡನ ಕೊಲೆ ಪ್ರಕರಣದ 6 ಆರೋಪಿಗಳನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಮಲ್ಪೆಯ ಗೌತಮ್, ಮನೋಜ್ ಭಂಡಾರಿ, ಧನುಷ್, ಚೇತನ್ ಕುಮಾರ್, ತಿಲಕ ರಾಜ್ ಹಾಗು ಕದಿಕೆಯ ಸಿದ್ದಾರ್ಥ ಬಂಧಿತರು. ಫೆ.14ರಂದು ನವೀನ್ ನಾಯ್ಕ ಕೊಲೆ ಮಾಡಿದ್ದ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಪ್ರಕರಣ ಬೇಧಿಸಲು ಡಿವೈಎಸ್‌ಪಿ ಸದಾನಂದ ಎಸ್. ನಾಯ್ಕ್ ನಿರ್ದೇಶನದಲ್ಲಿ ಬ್ರಹ್ಮಾವರ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ, ಪಿ.ಎಸ್.ಐ ಗುರುನಾಥ ಬಿ. ಹಾದಿಮನಿ, ಮಲ್ಪೆ ಪಿಎಸ್‌ಐ ತಿಮ್ಮೇಶ ನೇತೃತ್ವದಲ್ಲಿ ವಿಶೇಷ ತಂಡ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಸೋಮವಾರ ಉಡುಪಿಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಎಎಸ್‌ಐ ಕೃಷ್ಣಪ್ಪ, ಚಾಲಕ ಸಂತೋಷ, ಸಿಬ್ಬಂದಿ ಅಶೋಕ ಮೆಂಡನ್, ಪ್ರವೀಣ್ ಶೆಟ್ಟಿಗಾರ್, ಗಣೇಶ ದೇವಾಡಿಗ, ರಾಘವೇಂದ್ರ, ಸಂತೋಷ ಶೆಟ್ಟಿ, ದಿಲೀಪ್ ಕುಮಾರ, ಮಹಮ್ಮದ್ ಅಜ್ಮಲ್, ಅಬ್ದುಲ್ ಬಶೀರ್, ನಿಂಗಪ್ಪ, ದೇವರಾಜ, ರಾಜೇಶ, ದಿವ್ಯಾ, ರತ್ನಾಕರ ಶೆಟ್ಟಿ, ರವಿರಾಜ, ಎಎಸ್‌ಐ ಯೋಗೀಶ್, ಸಿಬ್ಬಂದಿ ಕಿರಣ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.