ಕಾಪು (ಪಡುಬಿದ್ರಿ): ಇಲ್ಲಿನ ದಂಡತೀರ್ಥ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ವಿಭಾಗಗಳನ್ನು ಒಳಗೊಂಡ ಶತಮಾನೋತ್ಸವ ಕಟ್ಟಡದಲ್ಲಿ ನಿರ್ಮಿಸಲಾದ ಸಭಾಭವನ, ಸ್ಮಾರ್ಟ್ಕ್ಲಾಸ್ ವಿಭಾಗವನ್ನು ಉದ್ಘಾಟಿಸಲಾಯಿತು.

ವಿಜಯಾ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಕಾಪು ಜಯಕರ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಅತಿ ಹಳೆಯ ಪ್ರಾಥಮಿಕ ಶಾಲೆಗಳಲ್ಲಿ ಒಂದಾದ ಈ ವಿದ್ಯಾಸಂಸ್ಥೆಯಲ್ಲಿ ಹಲವಾರು ಮಂದಿ ವಿದ್ಯಾರ್ಜನೆಗೈದು ಉನ್ನತ ಸ್ಥಾನಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ವಿದ್ಯಾಸಂಸ್ಥೆ ಪಠ್ಯ– ಪಠ್ಯೇತರ ಚಟುವಟಿಕೆಗಳಲ್ಲಿ ಜಿಲ್ಲೆ, ರಾಜ್ಯವನ್ನು ಪ್ರತಿನಿಧಿಸಿದೆ ಎಂದರು.

ಸಾವಿರಾರು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ನಿರ್ಮಿಸಲ್ಪಟ್ಟ ಹೊಸ ಸಭಾಭವನ, ಸ್ಮಾರ್ಟ್ಕ್ಲಾಸ್ ತರಗತಿಗಳು ಇಂದು ಅತ್ಯಂತ ಅವಶ್ಯಕ. ಶಿಕ್ಷಕರು, ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಿ. ಮುಂದಿನ ಪೀಳಿಗೆಗೆ ಇವು ಪ್ರೇರಣೆ ನೀಡಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಚಾಲಕ ಡಾ.ಕೆ. ಪ್ರಶಾಂತ್ ಶೆಟ್ಟಿ ಮಾತನಾಡಿ, ಇಂದು ಮಕ್ಕಳ ಪ್ರತಿಭೆ ವಿಶಿಷ್ಟವಾಗಿ ಅರಳಬೇಕಾದರೆ ಸ್ಮಾರ್ಟ್ ತರಗತಿಗಳೂ ಅವಶ್ಯ. ಇದರಿಂದ ಮಕ್ಕಳು ಕ್ರಿಯಾಶೀಲವಾಗಿ ಸರ್ವಾಂಗೀಣ ಬೆಳವಣಿಗೆಗೆ ಸಹಕಾರವಾಗಲಿ ಎಂದರು.

ಕಾಪು ಗೋವಿಂದ ಶೆಟ್ಟಿ ಮೆಮೊರಿಯಲ್ ಟ್ರಸ್ಟ್ ಅಧ್ಯಕ್ಷೆ ಶೋಭಾ ಪಿ. ಶೆಟ್ಟಿ, ಸದಸ್ಯೆ ಪನ್ನಾ ಪಿ. ಶೆಟ್ಟಿ, ಎಲ್ಐಸಿ ಕಾಪು ನಿವೃತ್ತ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಮಕರ ಕನ್ಸ್ಟ್ರಕ್ಷನ್ ನಿರ್ದೇಶಕ ಸುಧಾಕರ ಶೆಟ್ಟಿ ಮಲ್ಲಾರ್, ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಗೇಬ್ರಿಯಲ್ ಫ್ರೆಂಕಿ ಮಸ್ಕರೇನ್ಹಸ್, ಕೃಪಾ ಅಮ್ಮನ್ನ, ಶೈಕ್ಷಣಿಕ ಸಂಯೋಜಕ ಶಿವಣ್ಣ ಬಾಯರ್, ಶಿಕ್ಷಕ– ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

ಪ್ರಾಂಶುಪಾಲ ನೀಲಾನಂದ ನಾಯ್ಕ್ ಸ್ವಾಗತಿಸಿದರು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಷ್ಮೀ ರಾವ್ ವಂದಿಸಿದರು. ಶಿಕ್ಷಕಿ ಸುನೈನಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.